ಆರ್ಡಿ :
ಆರ್ಡಿ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ 43 ನೇ ವರ್ಷದ ಶ್ರೀರಾಮ ಭಜನಾ ಮಂಗಲೋತ್ಸವವು ಆರ್ಡಿ ಚಿತ್ತೇರಿ ಶ್ರೀದುರ್ಗಾಪರಮೇಶ್ವರಿ ದೇವಳದ ಶ್ರೀದೇವಿಯ ಸನ್ನಿಧಿಯಲ್ಲಿ ಶನಿವಾರ ಮಧ್ಯಾಹ್ನ ಮಹಾಪೂಜೆ
ಸಂಜೆ ಆರಂಭಗೊಂಡು ಭಾನುವಾರ ಬೆಳಿಗ್ಗೆ ತನಕ ಅಖಂಡ ಭಜನೆಯೊಂದಿಗೆ ಸಂಪನ್ನಗೊಂಡಿದೆ.

ಶ್ರೀ ಚಿತ್ತೇರಿ ದುರ್ಗಾಪರಮೇಶ್ವರಿ ಭಜನಾ ಮಂಡಳಿ
ಆರ್ಡಿ, ಶ್ರೀ ಉಮಾಮಹೇಶ್ವರ ಮಹಾಗಣಪತಿ ಮಹಿಳಾಭಜನಾ ಮಂಡಳಿ, ಬೆಪ್ಡೆ, ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಪಾಡಿಗಾರ, ಶ್ರೀ ಮಹಾಗಣಪತಿ ಭಜನಾ ಮಂಡಳಿ ತೊಂಬಟ್ಟು, ಶ್ರೀ ರಾಮ ಭಜನಾ ಮಂಡಳಿ ಶಂಕರ ನಾರಾಯಣ ದೇವಸ್ಥಾನ, ಬೆಳ್ವೆ.
ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ(ರಿ.)ಕೊಂಜಾಡಿ, ಶ್ರೀ ಜಲದುರ್ಗಾಪರಮೇಶ್ವರಿ ಭಜನಾ ಮಂಡಳಿ ಶೇಡಿಮನೆ, ಶ್ರೀ ದುರ್ಗಾಂಬಾ ಭಜನಾ ಮಂಡಳಿ, ಅರಸಮ್ಮಕಾನು, ಶ್ರೀ ವೀರಭದ್ರ ಭಜನಾ ಮಂಡಳಿ, ಶಿರಂಗೂರು, ಮಡಾಮಕ್ಕಿ. ಶ್ರೀಲಕ್ಷ್ಮೀ ನಾರಾಯಣ ಭಜನಾ ಮಂಡಳಿ, ಹಳೇ ಸೋಮೇಶ್ವರ ಭಜನಾ ಮಂಡಳಿಯವರು ಅಖಂಡ ಭಜನೆಯಲ್ಲಿ ಭಾಗವಹಿಸಿದರು. ಊರ ಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.