
ಆರ್ಡಿ : ಆರ್ಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ 44 ನೇ ವರ್ಷದ ಭಜನಾ ಮಂಗಲೋತ್ಸವದ ಪ್ರಯುಕ್ತ ಆರ್ಡಿ ಶ್ರೀ ಸಿದ್ದಿ ವಿನಾಯಕ ಚಿತ್ತೇರಿ ದುರ್ಗಾಪರಮೇಶ್ವರಿ ದೇವಳದಲ್ಲಿ ಶ್ರೀದೇವಿಯ ಸನ್ನಿಧಿಯಲ್ಲಿ ಮಹಾಪೂಜೆ, ರಂಗಪೂಜೆ ಹಾಗೂ ಅಖಂಡ ಭಜನೆಯೊಂದಿಗೆ ಇತ್ತೀಚೆಗೆ ಸಂಪನ್ನಗೊಂಡಿದೆ.
ಬೆಪ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ಮಹಿಳಾ ಭಜನಾ ಮಂಡಳಿ, ಪಾಡಿಗಾರ ಶ್ರೀರಾಮ ಮಹಿಳಾ ಭಜನಾ ಮಂಡಳಿ, ಅರಸಮ್ಮಕಾನು ಶ್ರೀ ಪಂಚರತಿ ಮಹಿಳಾ ಭಜನಾ ಮಂಡಳಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ (ರಿ.) ಕೊಂಜಾಡಿ, ಶೇಡಿಮನೆ ಶ್ರೀ ಜಲದುರ್ಗಾಪರಮೇಶ್ವರಿ ಭಜನಾ ಮಂಡಳಿ, ಅರಸಮ್ಮಕಾನು ಶ್ರೀದುಗಾಂಬಾ ಭಜನಾ ಮಂಡಳಿ,
ಬೆಪ್ಡೆ ಶ್ರೀ ಉಮಾ ಮಹೇಶ್ವರ ಭಜನಾ ಮಂಡಳಿ, ಮಡಾಮಕ್ಕಿ ಶಿರಂಗೂರು ಶ್ರೀವೀರಭದ್ರ ಭಜನಾ ಮಂಡಳಿ,
ಹಳೇ ಸೋಮೇಶ್ವರ ಶ್ರೀಲಕ್ಷ್ಮೀ ನಾರಾಯಣ ಭಜನಾ ಮಂಡಳಿ, ಮರೂರು ಶ್ರೀ ನಾಗಬ್ರಹ್ಮ ಭಜನಾ ಮಂಡಳಿಯ
ತಂಡಗಳ ಅಖಂಡ ಭಜನೆ ನಡೆಯಿತು.
ಅಧ್ಯಕ್ಷ ಸುರೇಶ ಶೆಟ್ಟಿ ಆರ್ಡಿ, ಸಂಚಾಲಕ ಅನಂದ ಪೂಜಾರಿ ಕೆರ್ಜಾಡಿ, ಕಾರ್ಯದರ್ಶಿ ಪ್ರಹ್ಲಾದ್ ಶೆಟ್ಟಿ ಆರ್ಡಿ, ಉಪ ಕಾರ್ಯದರ್ಶಿ ವೆಂಕಟೇಶ ಶೆಟ್ಟಿ ಆರ್ಡಿ,ಅರ್ಚಕ ಗೋಪಾಲಕೃಷ್ಣ ಶಾಸ್ತ್ರಿ.ಊರ ಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.