
ಆರ್ಡಿ: ಆರ್ಡಿ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಚಿತ್ತೇರಿ ಆರ್ಡಿ ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಬೆಳ್ವೆ ವಲಯ ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಹೆಬ್ರಿ ತಾಲೂಕು ಬೆಳ್ವೆ ವಲಯ ಇವರ ಸಹಕಾರದೊಂದಿಗೆ ಸಮಸ್ತ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಸಂಪೂರ್ಣ ನವಗ್ರಹ ಸಹಿತ ಶನಿಯಾಗ ಮಾ.29 ನೇ ಶನಿವಾರ ಬೆಳಿಗ್ಗೆಯಿಂದ ನಡೆಯಲಿದೆ.
ಬೆಳಿಗ್ಗೆ ಗಂ 8 ರಿಂದ ದೇವತಾ ಪ್ರಾರ್ಥನೆ,ಕಲ್ಪೋಕ್ತ
ಪೂಜೆ,ಸಂಪೂರ್ಣ ನವಗ್ರಹ ಸಹಿತ ಶನಿಯಾಗ ಆರಂಭ,
ಬೆಳಿಗ್ಗೆ ಗಂ 8.30 ಕ್ಕೆ ಲಘು ಉಪಹಾರ, ಮಧ್ಯಾಹ್ನ ಗಂ 12 ಕ್ಕೆ ಮಹಾಮಂಗಳಾರತಿ, ಗಂ 12.30 ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಶ್ರೀಮತ್ ಶನೀಶ್ವರ ಸ್ವಾಮಿಯು ಕುಂಭರಾಶಿಯಿಂದ ಮೀನ ರಾಶಿಗೆ ಪರಿವರ್ತನೆಯಾಗಲಿರುವ ದಿನವಾಗಿದೆ. ಜನ್ಮಕುಂಡಲಿಯಲ್ಲಿ ಶನಿಯು ನೀಚ ಸ್ಥಾನದಲ್ಲಿದ್ದು, ಶನಿಶಾಂತಿ ಮಾಡದಿದ್ದರೆ ಮದುವೆ, ಮಕ್ಕಳು,
ಶಿಕ್ಷಣ,ವೃತಿ, ವ್ಯವಹಾರ ಸೇರಿದಂತೆ ಅನೇಕ
ಪ್ರಮುಖ ಅಂಶಗಳ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ.
ಶನಿಗ್ರಹದ “ವಕ್ರ ದೃಷ್ಠಿ”ಯನ್ನು ಕಡಿಮೆ ಮಾಡಲು ಶನಿ
ಪೂಜೆಯನ್ನು ನಡೆಸಬೇಕಾಗುತ್ತದೆ. ಜನ್ಮಕುಂಡಲಿ
(ಜಾತಕ) ಪ್ರಕಾರ ಸಾಡೇ ಸಾಥಿಗೆ ಒಳಗಾಗುವವರಿಗೆ ಶನಿಶಾಂತಿ ಹೋಮ ಅತ್ಯಂತ ಶಿಪಾರಾಸು ಮಾಡಲಾದ ಪೂಜೆಯಾಗಿದೆ. ಶನಿ ಶಾಂತಿ ಮಾಡುವುದರಿಂದ ಉತ್ತಮ ಫಲಿತಾಂಶಗಳು ದೊರೆಯುತ್ತದೆ. ಸಂಪತ್ತು ಸಮೃದ್ಧಿ, ಸಾಮಾಜಿಕ ಸ್ಥಾನಮಾನದಲ್ಲಿ ಉನ್ನತಿಯಾಗುತ್ತದೆ. ಸಾಲಗಳಿಂದ ವಿಮುಕ್ತಿ, ಆರ್ಥಿಕ ಅಭಿವೃದ್ಧಿಯಾಗುತ್ತದೆ.ಮಾನಸಿಕ ನೆಮ್ಮದಿ ಮನಶಾಂತಿ ಮದುವೆ ವಿಚಾರದ ಆಡೆತಡೆ ನಿವಾರಣೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಮುಕ್ತಿಯೊಂದಿಗೆ ಜಯ
ದೊರೆಯುತ್ತದೆ. ಈ ನಿಟ್ಟಿನಲ್ಲಿ ಸಾಮೂಹಿಕ ಸಂಪೂರ್ಣ
ನವಗ್ರಹ ಸಹಿತ ಶನಿಯಾಗದಲ್ಲಿ ಪಾಲ್ಗೊಳ್ಳಲು
ಅವಕಾಶವಿದೆ.