ಆರ್ಡಿ : ಆರ್ಡಿ ಸಮೀಪದ ಕೆರ್ಜಾಡಿ ಚಿತ್ತೇರಿ ಶ್ರೀದುರ್ಗಾಪರಮೇಶ್ವರಿ ಸಪರಿವಾರ ದೇವಸ್ಥಾನದಲ್ಲಿ ಮೇ 8 ನೇ ಬುಧವಾರ ವಾರ್ಷಿಕ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಿಗ್ಗೆ ಪ್ರಾರ್ಥನೆ, ಗುರುಗಣಪತಿ ಪೂಜೆ,ಪುಣ್ಯಾಹವಾಚನ, ನವಕ ಪ್ರಧಾನ ಹೋಮ, ಜಗ್ಲುಗುಡ್ಡೆ ಪ್ರೇಮಾ ಬಾಬು ಶೆಟ್ಟಿ ಹಾಗೂ ಮಕ್ಕಳಿಂದ ಚಂಡಿಕಾಹೋಮ ಸೇವೆ,ಗಂ 9.30 ಕ್ಕೆ ತುಲಾಭಾರ ಸಂಕಲ್ಪ, ಹರಿವಾಣ ನೈವೇದ್ಯ, ಗಂ 11.30 ಕ್ಕೆ
ತುಲಾಭಾರ ಸೇವೆ, ಪಂಚಾಮೃತ ಸಹಿತ
ಕಲಶಾಭಿಷೇಕ, ಮಹಾಪೂಜೆ, ಗಂ 12 ಕ್ಕೆ ಚಂಡಿಕಾಹೋಮದ ಪೂರ್ಣಾಹುತಿ,ತೀರ್ಥ ಪ್ರಸಾದ,
ಮಧ್ಯಾಹ್ನ ಗಂ 12.30ಕ್ಕೆ ಅನ್ನಪ್ರಸಾದ,
ಮಧ್ಯಾಹ್ನ ಗಂ 1 ರಿಂದ ಶ್ರೀ ನಾಗ ಕನ್ನಿಕಾ ಭಜನಾ
ಬಳಗ ಅರಸಮ್ಮಕಾನು ಮತ್ತು ಅತಿಥಿ ಗಾಯಕರುಗಳಿಂದ ಭಜನಾ ಗಾನಾಮೃತ,ಸಂಜೆ ಗಂ.6 ರಿಂದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಚಿತ್ತೇರಿ ಆರ್ಡಿ, ಶ್ರೀದುರ್ಗಾಪರಮೇಶ್ವರಿ ಭಜನಾ
ಮಂಡಳಿ(ರಿ.)ಕೊಂಜಾಡಿ, ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿ(ರಿ.), ಹಳೆ ಸೋಮೇಶ್ವರ ನಾಡ್ಪಾಲ್ ತಂಡಗಳಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂ 9 ಕ್ಕೆ
ರಂಗಪೂಜೆ,ಸಂದರ್ಶನ, ಸುತ್ತು ಬಲಿ, ಪ್ರಸಾದ ವಿತರಣೆ,
ರಾತ್ರಿ ಗಂ 9.30 ಕ್ಕೆ ಅನ್ನಪ್ರಸಾದ,ಗಂ 10.30 ರಿಂದ
ಕಲ್ಲುಕುಟಿಗ ಮತ್ತು ಸತ್ಯದೇವತೆಗೆ ಸಿರಿ ಸಿಂಗಾರ
ಕೋಲಸೇವೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.