ಆರ್ಡಿ : ಆರ್ಡಿ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲಾ ಆರಂಭೋತ್ಸವದ ಪ್ರಯುಕ್ತ ಶಾಲೆಯನ್ನು ತಳಿರು ತೋರಣ, ಬಣ್ಣದ ಬಣ್ಣದ ಬಲೂನ್‌ಗಳಿಂದ ಅಲಂಕರಿಸಿ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಗೆ
ದಾಖಾಲಾತಿಗೊಂಡ ಮಕ್ಕಳನ್ನು ವಾದ್ಯ ಮೇಳ,
ಪೂರ್ಣಕುಂಭದೊಂದಿಗೆ ಸ್ವಾಗತಿಸಿಕೊಳ್ಳಲಾಯಿತು.
ಮಕ್ಕಳು ಶಾಲೆಗೆ ಬರುವ ಖುಷಿಯಲ್ಲಿ ನಲಿಯುತ್ತಾ
ಶುಕ್ರವಾರ ತರಗತಿಯನ್ನು ಪ್ರವೇಶಿಸಿದರು.
ಮುಖ್ಯ ಶಿಕ್ಷಕಿ ಯಶೋದಾ, ಸಹ ಶಿಕ್ಷಕ ವೃಂದವರು,
ಹಳೆ ವಿದ್ಯಾರ್ಥಿಗಳು,ಎಸ್‌ಡಿಎಂಸಿ ಸದಸ್ಯರು,
ಮಕ್ಕಳ ಪೋಷಕರು ಉಪಸ್ಥಿತರಿದ್ದರು.