ಧರ್ಮಸ್ಥಳ : ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದಲ್ಲಿ ರೂಪಿಸಿರುವ ‘ಮಂಜೂಷಾ’ ವಸ್ತುಸಂಗ್ರಹಾಲಯ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಿಂದ ವಿಶೇಷ ಮಾನ್ಯತೆ ಪಡೆದಿದೆ.
7,500 ತಾಳೆಗರಿ ಹಸ್ತಪ್ರತಿಗಳು, 21 ಸಾವಿರ ಕಲಾತ್ಮಕ ವಸ್ತುಗಳು, 25 ಸಾವಿರ ಅಪೂರ್ವ ಪ್ರಾಚೀನ ಗ್ರಂಥಗಳು ಹಾಗೂ ಸುಮಾರು 100 ವಿಂಟೇಜ್ ಕಾರುಗಳ ಸಂಗ್ರಹ ಇದೆ.
ನವದೆಹಲಿಯಲ್ಲಿರುವ ಸಂಸ್ಥೆಯ ಮುಖ್ಯಸ್ಥ ಅನಿಲ್ ಕುಮಾರ್ ಶರ್ಮ ಅವರು ಸೋಮವಾರ ಹೆಗ್ಗಡೆ ಅವರಿಗೆ ಪ್ರಮಾಣಪತ್ರ ನೀಡಿದರು.
‘ಒಬ್ಬರೇ ವ್ಯಕ್ತಿ 50 ವರ್ಷಗಳಲ್ಲಿ ನಮ್ಮ ಇತಿಹಾಸ, ಕಲೆ, ಸಂಸ್ಕೃತಿ, ಪ್ರಾಚೀನ ಕಲಾತ್ಮಕ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಸಾರ್ವಜನಿಕರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿರುವುದು ವಿಶಿಷ್ಟ ಕಾರ್ಯವಾಗಿದೆ’ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.