ವಾರಾಣಸಿ:
ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸರ್ವೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ಭಾರತೀಯ ಪುರಾತತ್ವ ಇಲಾಖೆ (ASI), ಅದನ್ನು ನಾಲ್ಕು ವಾರಗಳಕಾಲ ಬಹಿರಂಗಪಡಿಸದಂತೆ ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಈ ವಿಷಯವನ್ನು ತಿಳಿಸಿದ ಹಿಂದೂ ಅರ್ಜಿದಾರರ ಪರ ವಕೀಲರು, ‘ಅಲಹಾಬಾದ್ ಹೈಕೋರ್ಟ್‌ನ ಇತ್ತೀಚಿನ ತೀರ್ಪು ಆಧರಿಸಿರುವ ಎಎಸ್‌ಐ, ವರದಿ ಬಹಿರಂಗಕ್ಕೆ ಕಾಲಾವಕಾಶ ಕೋರಿದೆ. ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ಪ್ರಕರಣವನ್ನು ಗುರುವಾರದವರೆಗೂ ಮುಂದೂಡಿದರು’ ಎಂದು ತಿಳಿಸಿದ್ದಾರೆ.

ಮುಸ್ಲಿಂ ಅರ್ಜಿದಾರರ ಪದ ಸಲ್ಲಿಕೆಯಾದ ಕೆಲ ಮನವಿಗಳನ್ನು ಡಿ. 19ರಂದು ಅಲಹಾಬಾದ್ ಹೈಕೋರ್ಟ್‌ ವಜಾಗೊಳಿಸಿತ್ತು. ಜ್ಞಾನವಾಪಿ ಮಸೀದಿ ಜಾಗದಲ್ಲಿ ದೇವಾಲಯದ ಮರು ನಿರ್ಮಾಣ ಮಾಡುವ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರಿ ಸಲ್ಲಿಕೆಯಾಗಿದ್ದ ವಿಷಯ ಸೇರಿದಂತೆ ಹಲವು ಅರ್ಜಿಗಳು ಸೇರಿದ್ದವು.