ಬೆಳಗಾವಿ : ಉತ್ತರ ಕರ್ನಾಟಕದ ಜನಮಾನಸದ ಆರಾಧ್ಯ ದೈವ ಸುಕ್ಷೇತ್ರ ಉಳವಿ ಶ್ರೀ ಚನ್ನಬಸವೇಶ್ವರ ದೇವಸ್ಥಾನಕ್ಕೆ ರಸ್ತೆ ಸುಧಾರಣೆಯ ಸಂಪರ್ಕ ಕಲ್ಪಿಸುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.

ಸುಕ್ಷೇತ್ರ ಉಳವಿ ಶ್ರೀ ಚನ್ನಬಸವೇಶ್ವರ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ನಿರಂತರವಾಗಿ ದರ್ಶನ ಪಡೆಯಲು ಬರುವಂತಹದು ವಾಡಿಕೆ. ಈ ವರ್ಷ ಭಾರೀ ಮಳೆಯಿಂದಾಗಿ ಈ ಮಾರ್ಗದ ರಸ್ತೆ ಪೂಟೋಳ್ಳಿ ಕ್ರಾಸ್ ನಿಂದ ಗುಂದ ಮಾರ್ಗವಾಗಿ ದೇವಸ್ಥಾನದ ವರೆಗೆ ರಸ್ತೆ ಹದಗೆಟ್ಟಿದ್ದು ಪ್ರವಾಸಿಗರಿಗೆ ತುಂಬಾ ತೊಂದರೆಯಾಗುತ್ತಿದೆ. ಪ್ರತಿವರ್ಷ ಜರುಗುವ ಬಹುದೊಡ್ಡ ಅಸಂಖ್ಯಾತ ಸದ್ಭಕ್ತರು ಪಾದಯಾತ್ರೆಯ ಹಾಗೂ ಚಕ್ಕಡಿ ಬಂಡಿ ಮುಖಾಂತರ ದರ್ಶನ ಪಡೆಯಲು ಹೋಗುತ್ತಾರೆ. ಹೀಗಾಗಿ ಈ ಮಾರ್ಗದ ರಸ್ತೆಯ ಸುಧಾರಣೆ ಶೀಘ್ರಗತಿಯಲ್ಲಿ ದುರಸ್ತಿಗೊಳಿಸಲು ತಾವು ಆದೇಶ ನೀಡಬೇಕೆಂದು ಸಮಸ್ತ ಉತ್ತರ ಕರ್ನಾಟಕದ ಜನರ ಪರವಾಗಿ ತಮ್ಮಲ್ಲಿ ಕಳಕಳಿಯಿಂದ ವಿನಂತಿ ಮಾಡಿಕೊಳ್ಳುವುದಾಗಿ ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು ದೀಪಕ ಗುಡಗನಟ್ಟಿ, ಈ ಸಂದರ್ಭದಲ್ಲಿ ರಾಜು ಕುಡಸೋಮಣ್ಣವರ,ಶಿವಾನಂದ ತಂಬಾಕೆ,ರಾಜು ಸೊಗಲದ ಗಂಗಾರಾಮ ಶಿಗ್ಗಿಹಳ್ಳಿ,ರಮೇಶ ಯರಗಣ್ಣವರ,ಬಸವರಾಜ ಬೊಳಗೌಡರ,ಜಗದೀಶ ಮಾಳಗಿ ಉಪಸ್ಥಿತರಿದ್ದರು.