ಆರ್ಡಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಡಿ೯ ಇಲ್ಲಿ ತಾ.14.06.2012 ರಿಂದ ತಾ.31.05.2015 ತನಕ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಗೋವಿಂದ ನಾಯ್ಕ್ ಆವರ್ಸೆ ಸಮೀಪದ ಹೆಸ್ಕುಂದನಲ್ಲಿ ಇಂದು ನಿಧನರಾಗಿದ್ದಾರೆ.

ಆವರ್ಸೆ ಸಮೀಪದ ಹೆಸ್ಕುಂದ
ಮಂಜು ನಾಯ್ಕ್ ಹಾಗೂ ಕಮಲ ದಂಪತಿಯ ಪ್ರಥಮ ಪುತ್ರರು. ಇವರು ತಾರಾಪತಿ, ಉಪ್ಪಿನಂಗಡಿ, ಹೆಸ್ಕುಂದ, ಪುತ್ತೂರು, ಆವಸೆ೯, ಬೆಳ್ವೆ ಹಾಗೂ
ಆಡಿ೯ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದರು.
ಸರಳ ಸಜ್ಜನಿಕೆ, ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ನೆಚ್ಚಿನ ಶಿಕ್ಷಕರಾಗಿದ್ದರು. ಅವರ ನಿಧನಕ್ಕೆ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ನಾಗರಿಕರು ಸಂತಾಪ ಸೂಚಿಸಿದ್ದಾರೆ.