ಪಟ್ನಾ : ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾದ ಬೆನ್ನಲ್ಲೇ ಸೀತಾದೇವಿಯ ಹುಟ್ಟೂರು ಎನ್ನಲಾದ ಬಿಹಾರದ ಸೀತಾಮರ್ಹಿಯಲ್ಲಿ ಭವ್ಯ ಮಂದಿರ ನಿರ್ಮಿಸಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ 50 ಎಕರೆ ಭೂಸ್ವಾಧೀನ ಮಾಡಲು ಬಿಹಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸೀತಾಮರ್ಹಿಯಲ್ಲಿ ಈಗಾಗಲೇ ಸೀತಾ ದೇಗುಲ ಇದೆ. ಧಾರ್ಮಿಕ, ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ದೇಣಿಗೆಯಲ್ಲಿ ಸೀತಾ ದೇಗುಲವನ್ನು ಪುನರ್ ಅಭಿವೃದ್ಧಿ ಪಡಿಸಲಾಗುವುದು. ಅಯೋಧ್ಯೆಯ ರಾಮಮಂದಿರದಂತೆ ಭವ್ಯ ಮಂದಿರ ನಿರ್ಮಿಸಲಾಗುವುದು. ಅಯೋಧ್ಯೆಗೆ ಭೇಟಿ ನೀಡುವವರು ಇಲ್ಲಿಗೂ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ನಾಯಕ ಕಾಮೇಶ್ವರ ಚೌಪಾಲ್ ತಿಳಿಸಿದ್ದಾರೆ.