ಕುಂದಾಪುರ :
ತಾನು ಓದಿದ್ದ ಕೆರಾಡಿ ಶಾಲೆ ಅಭಿವೃದ್ಧಿಗೆ ಖ್ಯಾತ ಚಲನಚಿತ್ರ ರಿಷಬ್ ಶೆಟ್ಟಿ ಪಣತೊಟ್ಟಿದ್ದಾರೆ.
ನಾನು ಈ ಶಾಲೆಯಲ್ಲಿ ಕಲಿತು ಮೇಲೆ ಬಂದಿದ್ದೇನೆ. ಅನೇಕ ಸಾಧಕರು ಸರಕಾರಿ ಶಾಲೆಯಲ್ಲಿ ಓದಿ ಸಾಧಕರಾಗಿದ್ದಾರೆ. ಸರಕಾರಿ ಶಾಲೆಯಲ್ಲಿ ಓದುವ ಬಗ್ಗೆ ಕೀಳು ಅಂದಾಜು ಸಲ್ಲದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೆರಾಡಿ ಶಾಲೆಯನ್ನು ರಿಷಬ್ ಶೆಟ್ಟಿ ಪೌಂಡೇಶನ್ ಅಡಿಯಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಕೆರಾಡಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ಸ್ಪೋಕನ್ ಇಂಗ್ಲೀಷ್ ಮುಂತಾದವುಗಳನ್ನು ಜಾರಿಗೆ ತರಲು ಯೋಜನೆ ಸಿದ್ಧಪಡಿಸಲಾಗಿದೆ. ನಮ್ಮದು ಖಾಸಗಿ ಶಾಲೆಯ ಜೊತೆ ಸ್ಪರ್ಧೆಯಲ್ಲ. ಮುಂದಿನ ಐದು ವರ್ಷಗಳಲ್ಲಿ ಈ ಶಾಲೆಯನ್ನು ಮಾದರಿಯನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದರು.