Join The Telegram | Join The WhatsApp |
ಬೆಂಗಳೂರು-
ಜಗತ್ತಿನಾದ್ಯಂತ ಗಮನ ಸೆಳೆಯುತ್ತಿರುವ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಇದು ನಿಜಕ್ಕೂ ಉತ್ತಮ ಸಮಯ. ಆರ್‌ಆರ್‌ಆರ್‌ನ ನಾಟು ನಾಟು ಹಾಡಿನ ಆಸ್ಕರ್ ವಿಜಯದ ಸಂಭ್ರಮಾಚರಣೆ ಕಡಿಮೆಯಾಗುವ ಮೊದಲು, ರಿಷಬ್ ಶೆಟ್ಟಿ ಕಾಂತಾರ ಕಡಲಾಚೆಯಲ್ಲಿ ಸುದ್ದಿ ಮಾಡುತ್ತಿದೆ.
ವಿಶ್ವಾದ್ಯಂತ ಬಹು ಭಾಷೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಕನ್ನಡ ಚಲನಚಿತ್ರ ಕಾಂತಾರ ವಿಶ್ವಸಂಸ್ಥೆಯ ಜಿನೀವಾದಲ್ಲಿ ಮಾರ್ಚ್ 17 ರಂದು ಹಾಲ್ ಸಂಖ್ಯೆ 13 ನಲ್ಲಿರುವ ಪಾಥೆ ಬಾಲೆಕ್ಸರ್ಟ್‌ನಲ್ಲಿ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ.
ಈಗಾಗಲೇ ಸ್ವಿಜರ್ಲೆಂಡ್‌ನ ಜಿನೇವಾಗೆ ಪ್ರಯಾಣ ಬೆಳೆಸಿರುವ ರಿಷಭ್ ಶೆಟ್ಟಿಯವರು, ವಿಶ್ವ ಸಂಸ್ಥೆಯ ಹಾಲ್ ನಂ.13(ಪಾಥೇ ಬಾಲೆಕ್ಸೆರ್ಟ್) ನಲ್ಲಿ ವಿಶ್ವಸಂಸ್ಥೆಯ ಸದಸ್ಯರೊಂದಿಗೆ ಸಿನಿಮಾ ವೀಕ್ಷಿಸಲಿದ್ದಾರೆ.
ಮೂಲಗಳ ಪ್ರಕಾರ, ಈಗಾಗಲೇ ರಿಷಭ್ ಶೆಟ್ಟಿಯವರು, ಸಿನಿಮಾ ಪ್ರದರ್ಶನಕ್ಕೆ ಬೇಕಾದ ಎಲ್ಲ ಸಿದ್ಧತೆ ಮುಗಿಸಿದ್ದಾರೆ. ಸಿನಿಮಾ ಮುಗಿದ ಮೇಲೆ ಈ ಚಿತ್ರಕ್ಕೂ ಮತ್ತು ಪರಿಸರಕ್ಕೂ ಇರುವ ಸಂಬಂಧದ ಬಗ್ಗೆ ಹೇಳಲಿದ್ದಾರೆ. ಜತೆಗೆ, ಪ್ರೇಕ್ಷಕರನ್ನು ಉದ್ದೇಶಿಸಿ ಕನ್ನಡದಲ್ಲೇ ಮಾತನಾಡಲಿದ್ದಾರೆ. ಬಳಿಕ ವಿಶ್ವಸಂಸ್ಥೆ ರಾಜತಾಂತ್ರಿಕರ ಜತೆ ಖಾಸಗಿ ಡಿನ್ನರ್ ನಲ್ಲಿಯೂ ಭಾಗಿಯಾಗಲಿದ್ದಾರೆ.
Join The Telegram | Join The WhatsApp |