ದೆಹಲಿ: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು.

ಈ ಸಲ ಕನ್ನಡಕ್ಕೆ ಏಳು ಪ್ರಶಸ್ತಿಗಳು ಸಿಕ್ಕಿವೆ. ಕಾಂತಾರಾ ಸಿನಿಮಾದ ಅತ್ಯುತ್ತಮ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ರಿಷಬ್ ಅವರಿಗೆ ರಾಷ್ಟ್ರಪತಿಗಳು ನೀಡಿದರು. ಇದಲ್ಲದೆ ಕಾಂತಾರ ಸಿನಿಮಾಕ್ಕೆ ಅತ್ಯುತ್ತಮ ಮನರಂಜನೆ ಸಿನಿಮಾ, ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಯನ್ನು ಕೆಜಿಫ್ 2, ಸಾಹಸ ನಿರ್ದೇಶನಕ್ಕೆ ಇರುವ ಪ್ರಶಸ್ತಿ ಕೆಜಿಎಫ್ 2, ಮಧ್ಯಂತರ ಸಿನಿಮಾಕ್ಕಾಗಿ ಅತ್ಯುತ್ತಮ ಸಂಕಲನ ಪ್ರಶಸ್ತಿಯನ್ನು ಸುರೇಶ ಅರಸ್, ನಿರ್ದೇಶಕರ ಚೊಚ್ಚಲ ಸಿನಿಮಾ ಪ್ರಶಸ್ತಿಯನ್ನು ಮಧ್ಯಂತರ ಸಿನಿಮಾ ನಿರ್ದೇಶಕ ದಿನೇಶ್ ಶೆಣೈ, ಅತ್ಯುತ್ತಮ ಕಲೆ ಮತ್ತು ಸಾಂಸ್ಕೃತಿಕ ಚಲನಚಿತ್ರ ಪ್ರಶಸ್ತಿ ರಂಗ ವೈಭೋಗ ಸಿನಿಮಾಕ್ಕೆ ಪ್ರದಾನ ಮಾಡಲಾಯಿತು. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಹಿರಿಯ ನಟ ಮಿಥುನ ಚಕ್ರವರ್ತಿ ಅವರಿಗೆ ರಾಷ್ಟ್ರಪತಿಗಳು ವಿತರಣೆ ಮಾಡಿದರು.