
ಹೆಬ್ರಿ :
ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ರಿತೇಶ್ ಆರ್ ಇವರು ಉದ್ಯಾವರದಲ್ಲಿ ನಡೆದ 7ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆದಲ್ಲಿ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಎರಡು ಚಿನ್ನದ ಪದಕವನ್ನು ಗಳಿಸಿರುತ್ತಾರೆ. ಸೋಮೇಶ್ವರದ ರಘುನಾಥ ನಾಯ್ಕ ಮತ್ತು ಚಂದ್ರಾವತಿ ಇವರ ಪುತ್ರರಾದ ಇವರು ರೆನ್ಸಿ ಸೋಮನಾಥ ಮತ್ತು ಡಾ/ ವಿಜಯಲಕ್ಷ್ಮಿ ಆರ್ ನಾಯಕ್ ಇವರಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ . ಇವರಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಅಭಿನಂದನೆ ಗಳನ್ನು ಸಲ್ಲಿಸಿರುತ್ತಾರೆ.