ಬೆಳಗಾವಿ : ಖಾನಾಪುರ ತಾಲೂಕಿನಲ್ಲಿ ಹರಿಯುವ ನೀರು ಇದೀಗ ಗರಿಷ್ಠ ಮಟ್ಟಕ್ಕೆ ತಲುಪಿದೆ. ನದಿ ಪಾತ್ರದಲ್ಲಂತೂ ತೀವ್ರ ಗತಿಯಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಶನಿವಾರ ಬೆಳಗ್ಗೆ ಖಾನಾಪುರದ ಮಲಪ್ರಭಾ ನದಿ ತಟದಲ್ಲಿರುವ ಇಸ್ಕಾನ್ ಮಂದಿರ ಸನಿಹ ನೀರು ಬಂದಿದೆ.

ಶನಿವಾರ ಖಾನಾಪುರ ಪಟ್ಟಣದಲ್ಲಿ ಮಳೆಯ ಪ್ರಮಾಣ ತುಸು ಕಡಿಮೆಯಾಗಿ ಬಿಡುವು ಪಡೆದುಕೊಂಡಿತ್ತು. ಆದರೆ, ಜಾಂಬೋಟಿ ಮತ್ತು ಕಣಕುಂಬಿ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಿದೆ. ಖಾನಾಪುರ ತಾಲೂಕಿನ ಬಹುಭಾಗ ಪಶ್ಚಿಮ ಘಟ್ಟಗಳಿಂದ ಆವೃತವಾಗಿದೆ. ಹೀಗಾಗಿ, ಇಲ್ಲಿ ಮಳೆಗಾಲದ ನಾಲ್ಕು ತಿಂಗಳ ಅವಧಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಅದರಲ್ಲೂ ಈ ವರ್ಷ ವಿಪರೀತ ಪ್ರಮಾಣದಲ್ಲಿ ಮಳೆಯಾಗಿದೆ.