Join The Telegram | Join The WhatsApp |
ಬೆಳಗಾವಿ :
ಕೆ ಎಲ್ ಇ ಸಂಸ್ಥೆಯ ಎಸ್ ಎಮ್ ಎಸ್ ಪದವಿ ಮಹಾವಿದ್ಯಾಲಯವು ಆಯೋಜಿಸಿದ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಅಂತರ ವಲಯ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಕೆ ಎಲ್ ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ ಎರಡನೆಯ ಸ್ಥಾನ ಪಡೆದುಕೊಂಡಿದ್ದಾರೆ. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜ್ಯೋತಿ ಎಸ್. ಕವಳೇಕರ ಹಾಗೂ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರು.ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಬಿಸಿಎಂ ಕಾಲೇಜಿನ ಸಂಯೋಜಕಿ ಪ್ರೊ. ಪಲ್ಲವಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ.ಸಿ. ಕಾಮಗೋಳ , ಪ್ರೊ. ಪುರುಷೋತ್ತಮ ಐ, ದೈಹಿಕ ನಿರ್ದೇಶಕ ಡಾ.ಶಿವಾನಂದ ಬುಲಬುಲಿ, ಮುಂತಾದವರು ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.
Join The Telegram | Join The WhatsApp |