Join The Telegram | Join The WhatsApp |
ಬೆಂಗಳೂರು-
ಕನ್ನಡ ಭಾಷೆಯ ಜನಪ್ರೀಯ ರಿಯಾಲಿಟಿ ಟೆಲಿವಿಷನ್ ಗೇಮ್ ಶೋ ಬಿಗ್ ಬಾಸ್ ನ ಒಂಬತ್ತನೇ ಸೀಸನ್ ಕಾಯುವಿಕೆ ಮುಗಿದಿದೆ. ನಟ-ಆರ್‌ಜೆ ರೂಪೇಶ್ ಶೆಟ್ಟಿ ಬಿಗ್ ಬಾಸ್ ಕನ್ನಡ 9 ರ ಪ್ರಶಸ್ತಿಯನ್ನು ಗೆದ್ದಿದ್ದಾರೆ.ಅತ್ಯಾಕರ್ಷಕ ಗ್ರ್ಯಾಂಡ್ ಫಿನಾಲೆಯಲ್ಲಿ ಮಂಗಳೂರು ಹುಡುಗನನ್ನು ವಿಜೇತ ಎಂದು ಘೋಷಿಸಲಾಯಿತು. ರೂಪೇಶ್ ಶೆಟ್ಟಿ ಟ್ರೋಫಿ ಹಾಗೂ ಬಹುಮಾನ ಮೊತ್ತ ರೂ. 50 ಲಕ್ಷಗಳು ಪಡೆದರು. ಗಿರಿಗಿಟ್ ಚಿತ್ರದ ತುಳುನಾಡಿನ ಪ್ರೇಕ್ಷಕರ ಮನಗೆದ್ದ ನಟ ಈಗ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ. 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ನಾನು ಕೊನೆಗೂ ವಿನ್ ಆಗಿದ್ದೇನೆ. ನಿಮ್ಮೆಲ್ಲರಿಗೂ ಹೇಗೆ ಧನ್ಯವಾದ ಹೇಳಬೇಕೋ ತಿಳಿಯುತ್ತಿಲ್ಲ. ಬಿಗ್ ಬಾಸ್ ಒಟಿಟಿ ಸೀಸನ್ನಿಂದ ಇಲ್ಲಿಯ ತನಕ 140 ದಿನಗಳ ಜರ್ನಿ ಎಂದರೆ ಸುಲಭ ಅಲ್ಲ. ನನಗೆ ಸಪೋರ್ಟ್ ಮಾಡಿದ ಪ್ರತಿಯೊಬ್ಬರಿಗೂ ಥ್ಯಾಂಕ್ಸ್. ಈ ಪಯಣದಲ್ಲಿ ಏಳು-ಬೀಳುಗಳು ಇದ್ದವು. ಪ್ರತಿ ಕ್ಷಣದಲ್ಲೂ ನೀವೆಲ್ಲರೂ ನನ್ನ ಬೆಂಬಲಕ್ಕೆ ನಿಂತಿದ್ರಿ’ ಎಂದು ವೋಟ್ ಮಾಡಿದ ಎಲ್ಲರಿಗೂ ರೂಪೇಶ್ ಶೆಟ್ಟಿ ಧನ್ಯವಾದ ಅರ್ಪಿಸಿದ್ದಾರೆ.
ಬಿಗ್ ಬಾಸ್ -8 2021ರ ವಿಜೇತರಾಗಿ ಮಂಜು ಪಾವಗಡ, ರನ್ನರ್ ಅಪ್ ಅರವಿಂದ ಕೆಪಿ ಅಗಿದ್ದರು.
Join The Telegram | Join The WhatsApp |