ಬೆಳ್ವೆ: ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಏಳು ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸೂರ‍್ಗೋಳಿ ಬೆಂಬಲಿತ ಗುಂಪು ರೈತಬಂಧು ಸಹಕಾರ ಒಕ್ಕೂಟ ಬೆಳ್ವೆ ಇದರ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಿರುತ್ತಾರೆ. ಸಾಮಾನ್ಯ ಮೀಸಲು ಸ್ಥಾನದಿಂದ ಎಸ್.ಜಯರಾಮ ಶೆಟ್ಟಿ ಸೂರ‍್ಗೋಳಿ, ಇಚ್ಚಿತಾರ್ಥ ಶೆಟ್ಟಿ,ಚಂದ್ರಶೇಖರ ಶೆಟ್ಟಿ ಎಂ,ದಯಾನಂದ ಆರ್ ಶೆಟ್ಟಿ,ಹೆಚ್ ಸೀತಾರಾಮ ಶೆಟ್ಟಿ, ಹರೀಶ್ ಕಿಣಿ ಬಿ,ಜಯ ಗಳಿಸಿದ್ದಾರೆ.
ಮಹಿಳಾ ಮೀಸಲು ಸ್ಥಾನದಿಂದ ಸವಿತಾ ಶೆಟ್ಟಿ ಸುಜಾತ ಪೂಜಾರಿ, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಕೃಷ್ಣ ನಾಯ್ ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ಉದಯ್ ಶೆಟ್ಟಿ ಪ.ಜಾತಿ ಮೀಸಲು ಸ್ಥಾನದಿಂದ ಶಿವರಾಮ, ಪ.ಪಂ ಮೀಸಲು ಸ್ಥಾನದಿಂದ ಪ್ರದೀಪ್ ನಾಯ್ಕ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಅವಿರೋಧ ಆಯ್ಕೆಗೊಂಡ 6 ಸ್ಥಾನಗಳು ಕೂಡಾ ಜಯರಾಮ ಶೆಟ್ಟಿ ಅವರ ಗುಂಪು ಪಾಲಾಗಿದೆ, ಒಟ್ಟಾರೆಯಾಗಿ ಎಲ್ಲಾ 13 ಸ್ಥಾನಗಳು ಜಯರಾಮ ಶೆಟ್ಟಿಯವರ ನೇತೃತ್ವದ ತಂಡ ತನ್ನದಾಗಿಸಿಕೊಂಡಿದೆ.
ಅಭ್ಯರ್ಥಿಗಳು ಪಡೆದುಕೊಂಡ ಮತಗಳ ವಿವರ:
ಅನುದೀಪ್ ಭಾಸ್ಕರ್ ಶೆಟ್ಟಿ-354, ಇಚ್ಚಿತಾರ್ಥ ಶೆಟ್ಟಿ-1308, ಕೃಷ್ಣಮೂರ್ತಿ ಕಾಮತ್-245, ಚಂದ್ರಶೇಖರ ಶೆಟ್ಟಿ ಎಂ-1295, ಜಯರಾಮ ಶೆಟ್ಟಿ ಎಸ್-1432, ದಯಾನಂದ ಆರ್. ಶೆಟ್ಟಿ-1263, ದಯಾನಂದ ಪೂಜಾರಿ ಕೆ-1273, ಪ್ರಭಾಕರ ಶೆಟ್ಟಿ ವೈ-449, ಸತೀಶ ಕುಮಾರ್ ಶೆಟ್ಟಿ-522, ಸೀತಾರಾಮ ಶೆಟ್ಟಿ-1274, ಹರೀಶ ಕಿಣಿ ಬಿ-1347 ಮತಗಳನ್ನು ಪಡೆದಿದ್ದಾರೆ. 98 ಮತಗಳು ಅಸಿಂಧುವಾಗಿವೆ.