ಅಥಣಿ-

ಶ್ರೀ ಧರಣೀಂದ್ರ ಸಾಹಿತ್ಯ ವೇದಿಕೆ ಮತ್ತು ಅನುಪಮ ಪ್ರಕಾಶನ, ವಿನೂತನ ಪ್ರಕಾಶನ ಅಥಣಿ ಇವರ ಸಂಯುಕ್ತಾಶ್ರಯದಲ್ಲಿ ಆರ್ ಹೊಟೇಲ್ ಹಾಲ್ ನಲ್ಲಿ ನಡೆದ ಸಾಹಿತಿ ವಿಜಯ ಕರೋಲಿ ಅವರ 6 ಕೃತಿಗಳು ಮತ್ತು ಪುಷ್ಪವತಿ ವಿಜಯ ಕರೋಲಿ ಅವರ 1 ಕೃತಿ ಲೋಕಾರ್ಪಣೆ ಸಮಾರಂಭ ನೆರವೇರಿತು.

ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ವಿಶ್ರಾಂತ ಕುಲಪತಿಗಳಾದ ಮಲ್ಲೇಪುರಂ ಜಿ ವೆಂಕಟೇಶ ಮಾತನಾಡಿ ವಿಜಯ ಕರೋಲಿ ಅವರ ಕೃತಿಗಳು ನಾಲ್ಕು ಭಾಷೆಯಲ್ಲಿ ಪ್ರಾವಿಣ್ಯತೆ ಪಡೆದಿವೆ. ಕನ್ನಡ, ಹಿಂದಿ,ಉಧು೯, ಮರಾಠಿ ಭಾಷಾ ಪ್ರಭಾವ ಹೊಂದಿದ್ದು, ಇವರು ಬರೆದ ಗಜಲ್ ಗಳು ವಿಶಿಷ್ಟವಾಗಿವೆ. ಇವರ ಕಾವ್ಯ ಭಾಷೆಗಳು ಬಹಳ ಸುಸೂತ್ರವಾಗಿ ಹರಿದು ಬಂದಿದ್ದು, ಇವರ ಅನುವಾದ ಕೃತಿಗಳು ಬಹು ಖ್ಯಾತಿ ಪಡೆದಿವೆ ಎಂದರು.

ವಿಜಯ ಕರೋಲಿ ಅವರು ಜನಪ್ರಿಯತೆಗೆ ಹೆಚ್ಚು ಒತ್ತು ಕೊಡದೇ ಹಲವು ಕೃತಿಗಳನ್ನು ಬರೆದಿದ್ದಾರೆ. ಇವರ ಗಡಂಗ ಕೃತಿಯು ಮಧುಶಾಲಾದ ಅನುವಾದಗಿದೆ. ಕನ್ನಡದ ಕಾವ್ಯ ಅನುವಾದ ಪರಂಪರೆಯಲ್ಲಿ ರಾಜ್ಯದ ಶ್ರೇಷ್ಠ ಸಾಹಿತಿಗಳಲ್ಲಿ ವಿಜಯ ಕರೋಲಿ ಒಬ್ಬರು ಎಂದರು. ಸಾಹಿತಿ ಕೆ ಎಲ್ ಕುಂದರಗಿ ಮಾತನಾಡಿ ವಿಜಯ ಕರೋಲಿ ಒಬ್ಬ ಲೇಖಕರು ಅಷ್ಟೇ ಅಲ್ಲದೇ ಅವರು ಒಬ್ಬ ಹೋರಾಟಗಾರರು ಎಂದರು.

ಸಾಹಿತಿ ವಿಎಸ್ ಮಾಳಿ ಮಾತನಾಡಿ ವಿಜಯ ಕರೋಲಿ ಅವರ ಗಜಲುಗಳು ಬಹಳ ಸುಂದರವಾಗಿ ಮೂಢಿವೆ, ಒಬ್ಬ ಲೇಖಕ ಜನಪ್ರೀಯತೆಗೆ ಒತ್ತು ಕೊಡದೇ ತನ್ನಷ್ಟಕ್ಕೆ ತಾನು ಬರೆದ ಪುಸ್ತಕಗಳು ಅಮರತ್ವ ಪಡೆಯುತ್ತವೆ, ಇವರು ಬರೆದ ಪುಸ್ತಕಗಳು ನಾಡಿಗೆ ಬಹು ದೊಡ್ಡ ಆಸ್ತಿ ಎಂದರು, ಇವರ ಸಾಹಿತ್ಯ ಸೇವೆ ನಿರಂತರವಾಗಿ ಸಾಗಲಿ ಎಂದು ಹಾರೈಸಿದರು. ಸಾಹಿತಿ ಬಾಳಾಸಾಹೇಬ ಲೋಕಾಪುರ ಇದೇ ಸಂದರ್ಭದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಧರಣೀಂದ್ರ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಸವಿತಾ ಕರೋಲಿ, ಅಶೋಕ ರಾಮತೀರ್ಥ ಸಿದ್ದಣ್ಣ ಉತ್ನಾಳ, ಭಾರತಿ ಅಲಿಬಾದಿ, ಶ್ರೀಶೈಲ ಕಾಡದೇವರಮಠ,ಅಪ್ಪಾಸಾಹೇಬ ಅವಟಿ, ಬಿಎಂ ಮುಜಾವರ, ಎಸ್ ಎಸ್ ಢಾಲೆ, ಎಸ್ ಕೆ ಹೊಳೆಪ್ಪನವರ, ನ್ಯಾಯವಾದಿ  ವಿಟಿ ಬಿದರಿ, ಬಿಎ ಧರಿಗೌಡ, ಬಿಪಿ ನಾಯಿಕ, ಐಐ ಚೌಲಗಿ, ಬಿ. ಡಿ ಕಡೋಲಿ, ಎಂಕೆ ಸಂಕ, ಕುಸುಮಾ ಮಾಕಾಣಿ, ಅಪ್ಪಾಸಾಹೇಬ ಮಾಕಾಣಿ, ಹೇಮಾವತಿ ಪಾಟೀಲ, ಸಮೀರ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.