ಈ ಬಾರಿಯ ನಮ್ಮ ಪಯಣ ಇದೋ ಈಗ ಆರಂಭ. ಹಿರಿ ಕಿರಿಯ ಕಲಾವಿದರ ಕೂಡುವಿಕೆಯಲ್ಲಿ ದಾಖಲೆಯ 57 ನೇ ವರ್ಷದ ಸಾಲಿಗ್ರಾಮ ಮೇಳದ ಯಕ್ಷಗಾನ ತಿರುಗಾಟಕ್ಕೆ ಮೇಳ ಸಜ್ಜಾಗಿದೆ. 57 ಎಂಬುದು ಬರಿ ಸಂಖ್ಯೆಯಲ್ಲ; ಇತಿಹಾಸದ ಪುಟ. ಪುಟ ಮಗುಚಿದಷ್ಟೂ ಆಹಾ.. ಅದೆಂತಹಾ ಮಹಾ ಪ್ರತಿಭೆಗಳು ಬಾಳಿ ಬೆಳಗಿದ ದೃಶ್ಯ. ಕಾಣಲೇಬೇಕು, ನೆನಪಾಗಲೇಬೇಕು. ಈ ಮಹಾಸಾಗರದ ಒಳಗೆ ಏನೂ ಅಲ್ಲದ ನಾನೊಬ್ಬ ರೂಪುಗೊಳ್ಳಲು ಹಿಂದಿನ ಬಾರಿ ಅವಕಾಶ ಲಭಿಸಿತ್ತು. ಚಂದ್ರಕಾಂತ್ ಮೂಡುಬೆಳ್ಳೆಯವರಂತಹ ಒಳ್ಳೆಯ ನಾಲೆಡ್ಜ್ ಇರುವ ಸಭ್ಯ, ಶಿಸ್ತಿನ ಪ್ರಧಾನ ಭಾಗವತರಿಗೆ ಸಹ ಭಾಗವತನಾಗುವ ಸುಯೋಗಕ್ಕೆ ಸಂತೋಷಿಸಿದ್ದೆ. ಪುನಃ ಅವಕಾಶ ಮರುಕಳಿಸಿದೆ. ಪ್ರಸಂಗದ ಕುರಿತಾಗಿ ಏನು ಕೇಳಿದರೂ ಯಾವಾಗ ಕೇಳಿದರೂ ಕೂರಿಸಿಕೊಂಡು ಸಮಾಧಾನವಾಗಿ ಹೇಳಿಕೊಡುವ ಮೇಳದ ಹಿರಿಯ ಕಲಾವಿದರುಗಳೊಂದಿಗೆ ಇನ್ನಷ್ಟು ಅಧ್ಯಯನ ಮಾಡುವ ಅವಕಾಶ. ಕಳೆದ ಬಾರಿ ಮೇಳದಲ್ಲಿದ್ದಾಗಲೆ ಕೆ.ಸೆಟ್ ಪರೀಕ್ಷೆ ಉತ್ತೀರ್ಣನಾದೆ. ಸಮಯ ಸಿಕ್ಕಾಗ ಸದುಪಯೋಗ ಪಡಿಸಿದೆ‌. ಕಲಾವಿದರುಗಳ ಪ್ರೋತ್ಸಾಹ ಪ್ರೀತಿ ವಿಶ್ವಾಸವೆ ಭಯದಿಂದ ಬಂದವನಿಗೆ ಭರವಸೆಯ ಬೆಳಕು ನೀಡಿದ್ದು. ಕಲಿಯುವ ಮನದಲ್ಲಿಯೆ ಮತ್ತೊಂದು ತಿರುಗಾಟವೀಗ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಲಾಭಿಮಾನಿಗಳು ನಮ್ಮನ್ನು ಹಾರೈಸಬೇಕು. ನಮ್ಮ ಮೇಳದ ಯಜಮಾನರಾದಿಯಾಗಿ ಕಲಾವಿದರು ಹಾಗೂ ಎಲ್ಲ ನಮ್ಮ ಮೇಳದ ಸರ್ವ ಸಿಬ್ಬಂಧಿ ವರ್ಗದವರ ಪ್ರೀತಿ ವಿಶ್ವಾಸದಲ್ಲಿ ಕಲಾಭಿಮಾನಿಗಳ ಆಶೀರ್ವಾದದಲ್ಲಿ ಮುಂದಿನ ಹೆಜ್ಜೆ… ಈ ಬಾರಿ ಸಾಹಿತ್ಯದಲ್ಲಿಯೂ ಕೆಲಸ ಮಾಡಬೇಕಿದೆ. ಬರೆದಿಟ್ಟದ್ದು ಬಾಕಿಯಿದೆ. ಬರೆಯುವುದೂ ಬಾಕಿ ಇದೆ. ಮತ್ತೊಂದಿಷ್ಟು ಎಕ್ಸಾಂಗಳೂ ಉತ್ತೀರ್ಣನಾಗುವುದು ಅನಿವರ್ಯವೂ ಅಗತ್ಯತೆಯೂ ಇದೆ. ನೋಡೋಣ… ಕಳೆದ ಬಾರಿಯ ಮೊದಲ ಹೆಜ್ಜೆ ಭಯದಲ್ಲಿತ್ತು. ಈ ಬಾರಿಯ ಮೊದಲ ಹೆಜ್ಜೆ ಭಯಕ್ಕಿಂತಲೂ ಭರವಸೆಯಲ್ಲಿದೆ. ನಿಮ್ಮ ಆಶೀರ್ವಾದ ಬೇಕಷ್ಟೆ. ಅನಂತಾನಂತ ಧನ್ಯವಾದಗಳು.

-ಸೃಜನ್ ಗಣೇಶ್ ಹೆಗಡೆ