
ಬೆಳಗಾವಿ: ಚನ್ನಮ್ಮ ನಗರದಲ್ಲಿ ಮನೆಗೆ ನುಗ್ಗಿದ ಕಳ್ಳ ಮಹಿಳೆಯ ಮುಖಕ್ಕೆ ಖಾರದಪುಡಿ ಎರಚಿ ದರೋಡೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಚನ್ನಮ್ಮ ನಗರದ ಎಲ್&ಟಿ ಕಂಪನಿಯ ಉದ್ಯೋಗಿ ಮುರುಗನ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮುರುಗನ್ ಅವರು ಕೆಲಸಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳ ಅವರ ಪತ್ನಿಯ ಕಣ್ಣಿಗೆ ಎರಚಿ, ಕತ್ತು ಹಿಸುಕಿ ಕೊರಳಲ್ಲಿ ಇದ್ದ ಚಿನ್ನದ ಮಾಂಗಲ್ಯ ಸರ ದೋಚಿ ಪರಾರಿಯಾಗಿದ್ದಾನೆ ಎಂದು ಅವರು ಉದ್ಯಮಬಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.