Join The Telegram | Join The WhatsApp |
ಬೆಳಗಾವಿ :
ಸಾಮಾಜಿಕ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವುದನ್ನು ಪರಿಗಣಿಸಿ ಬೆಳಗಾವಿಯ ಉದ್ಯಮಿ, ಬಿಜೆಪಿ ಯುವ ಧುರೀಣ ರುದ್ರಣ್ಣ ಚಂದರಗಿ ಅವರಿಗೆ ಸಮಾಜ ಸೇವಾರತ್ನ ಪ್ರಶಸ್ತಿಯನ್ನು ಕಾಶಿ ಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಪ್ರದಾನ ಮಾಡಿದರು.
ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಬಿಸನಳ್ಳಿಯ ಶ್ರೀ ಕ್ಷೇತ್ರ ಕಾಶಿ ಜಂಗಮವಾಡಿ ಶಾಖಾ ಮಠದ ಏರ್ಪಡಿಸಲಾದ ಶ್ರೀಗಳ ಅಮೃತ ಮಹೋತ್ಸವ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು.
ರುದ್ರಣ್ಣ ಚಂದರಗಿಯವರು ಮುಂದಿನ ದಿನಗಳಲ್ಲಿ ಸಮಾಜ ಸೇವೆ ಹಾಗೂ ರಾಜಕೀಯ ರಂಗದಲ್ಲಿ ಮತ್ತಷ್ಟು ಸೇವೆ ಸಲ್ಲಿಸುವಂತಾಗಲಿ ಎಂದು ಶ್ರೀಗಳು ಶುಭ ಹಾರೈಸಿದರು.
25 ವರ್ಷಗಳ ಕಾಲ ರುದ್ರಣ್ಣ ಚಂದರಗಿಯವರು ಮಠ-ಮಾನ್ಯಗಳು, ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ನೆರವು, ಸಮಾಜ ಸೇವೆಯಲ್ಲಿ
ಗಣನೀಯ ಸೇವೆ ಸಲ್ಲಿಸಿರುವುದನ್ನು ಗಮನಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
Join The Telegram | Join The WhatsApp |