Join The Telegram | Join The WhatsApp |
ಬೆಳಗಾವಿ:
ಸ್ವಾರ್ಥಕ್ಕಾಗಿ ನಾಗರಿಕತೆಯನ್ನೇ ಮರೆತಂತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿ ಎಂದು ಕರೆದಿರುವದು ಪ್ರಜಾಪ್ರಭುತ್ವದಲ್ಲಿ ಶಾಸಕಾಂಗಕ್ಕೆ ತೋರಿದ ಅಗೌರ ಎಂದು ಕಟು ಶಬ್ದಗಳಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಟೀಕಿಸಿದ್ದಾರೆ.
ಗುರುವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ನಾಯಿ ವಿಶ್ವಾಸಾರ್ಹದ ಬಗ್ಗೆ ನಮಗೆ ಗೌರವ ಇದೆ. ಅತ್ಯಂತ ಪ್ರಾಮಾಣಿಕ, ನಂಬಿಗಸ್ಥ ಜೀವಿಯಾಗಿ ಬದುಕುವ ಜೀವಿ ನಾಯಿ. ಬಿಜೆಪಿಗೆ ಅದು ಅನ್ವರ್ಥ. ಬಿಜೆಪಿ ಕೂಡ ಯಾವತ್ತೂ ದೇಶನಿಷ್ಠೆ, ಸಮಾಜ ನಿಷ್ಠೆ ಉಳ್ಳದ್ದಾಗಿದ್ದು, ನಾವು ಒಂದು ರೀತಿಯ ಸಮಾಜದ ನಾಯಿಗಳಾಗಿದ್ದೇವೆ.
ನಾಗರಿಕ ಸಮಾಜವು ಭಾರತದ ಪ್ರಜಾಪ್ರಭುತ್ವದ ಒಳಗೆ ನಂಬಿಕೆ ಇಟ್ಟುಕೊಂಡಿದೆ. ನಮ್ಮೆಲ್ಲ ಭಾಷೆ ಮತ್ತು ಆಚರಣೆಗಳು ಪ್ರಜಾಪ್ರಭುತ್ವದಡಿಯಲ್ಲಿರುವ ಶಾಸಕಾಂಗದಲ್ಲಿ ನಡೆಯುತ್ತಿವೆ. ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುವುದು ಒಂದು ಕರ್ತವ್ಯವೂ ಆಗಿದೆ.
ತುರ್ತು ಪರಿಸ್ಥಿತಿ ಹೇರಿದ ನಂತರ ಪಾರ್ಲಿಮೆಂಟ್ ಒಳಗೆ ಚರ್ಚೆ ಆದ ಸಂದರ್ಭದಲ್ಲಿ ಅಟಲ್‌ಜಿ ಅವರು ಇಂದಿರಾ ಗಾಂಧಿಯವರಿಗೆ ಪತ್ರ ಬರೆಯುವಾಗ ಇಂದಿರಾಜಿ ಎಂದೇ ಸಂಬೋಧಿಸಿದ್ದರು. ಭಾಷೆಯ ಮೌಲ್ಯಯುತ ಬಳಕೆ ಇದರಿಂದ ಸಾಬೀತಾಗಿತ್ತು.
ಯಾವತ್ತು ಕಳ್ಳರನ್ನು ನೋಡಿದಾಗ ನಾಯಿ ಬೊಗಳುತ್ತದೆ. ಸಿದ್ದರಾಮಯ್ಯರಂಥ ಭ್ರಷ್ಟರು, ರಾಷ್ಟದ್ರೋಹಿಗಳಿಗೆ ಬಿಜೆಪಿಯ ಆತಂಕ, ಭಯ ಕಾಡುತ್ತಲೇ ಇರುತ್ತದೆ. ಅವರ ಮಾತು, ಗುಣ ಅವರ ವ್ಯಕ್ತಿತ್ವಕ್ಕೆ ಕೈಗನ್ನಡಿ.
ಸುಳ್ಳು, ಕುಟಿಲತನ, ಸಹಾಯ ಮಾಡಿದವರ ಬೆನ್ನಿಗೆ ಚೂರಿ ಹಾಕುವುದು ಸಿದ್ದರಾಮಯ್ಯರನವರ ಮೂರು ಗುಣಗಳು. ಇವತ್ತು ಅವರನ್ನು ಬೆಂಬಲಿಸಿದ ರಾಜ್ಯದ ಜನತೆಗೆ ದ್ರೋಹ ಮಾಡುವ ಕೆಲಸವನ್ನೂ ಮಾಡುವದರೊಂದಿಗೆ ಸಂವಿಧಾನ ಬದ್ದ ಶಾಸಕಾಂಗದ ನಾಯಕಾರಾಗಿರುವ ಮುಖ್ಯಮಂತ್ರಿಗಳನ್ನು ನಿಂದಿಸುವ ಮೂಲಕ
ಸಿದ್ದರಾಮಯ್ಯನವರು ಶಾಸಕಾಂಗಕ್ಕೆ ಅಪಚಾರ ಎಸಗಿದ ಇವರಿಗೆ ಸಂಸ್ಕಾರ ಇಲ್ಲದ ನಾಲಿಗೆ ಮತ್ತು ವ್ಯಕ್ತಿತ್ವ ಹೊಂದಿದ್ದು ಅವರ ಗುಣಧರ್ಮದಲ್ಲಿ ಅದು ಹಾಸುಹೊಕ್ಕಾಗಿದೆ. ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕವಚನದಲ್ಲಿ ಮಾತನಾಡಿದ್ದರು. ಅವರು ಸಂಸ್ಕಾರಹೀನ ಮನುಷ್ಯ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ರಾಹುಲ್ ಗಾಂಧಿಯವರ ನಿರ್ದೇಶನದ ರೀತಿಯಲ್ಲಿ ಅಪ್ಪುಗೆಯ ರಾಜಕಾರಣ ಮಾಡುವ ಹಂತದ ನಿಕೃಷ್ಟ ರಾಜಕಾರಣಿ ಸಿದ್ದರಾಮಯ್ಯ.
ಹಿಂದೆ ತುರ್ತು ಪರಿಸ್ಥಿತಿ ವಿರುದ್ಧ ಮಾತನಾಡಿದ್ದ ಸಿದ್ದರಾಮಯ್ಯ ಈಗ ಕಾಂಗ್ರೆಸ್ ಸೇರಿದ ನಂತರ ಆ ಕುರಿತಂತೆ ಯಾವುದೇ ಮಾತಾಡುತ್ತಿಲ್ಲ. ಅಂದರೆ ಅವರ ಸಮಯಸಾಧಕತನಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ?
ಸಿಎಂ ರೇಸಿನಲ್ಲಿರುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮತ್ತೂ ಅನೇಕರ ನಡುವಿನ ಸ್ಪರ್ಧೆ, ಕಾಲೆಳೆಯುವ ಪ್ರವೃತ್ತಿಯಿಂದ ಕಾಂಗ್ರೆಸ್ ರಾಜ್ಯದಲ್ಲಿ ನೆಲ ಕಚ್ಚಲಿದೆ. ಬಿಜೆಪಿ ಚುನಾವಣೆಗೆ ಸಿದ್ಧಗೊಂಡಿದ್ದು ಮತ್ತು ಜನಾಭಿಪ್ರಾಯ ಬಿಜೆಪಿ ಪರ ಇರುವುದನ್ನು ನೋಡಿ ಇವರ ಆತಂಕ ಹೆಚ್ಚಾಗಿದೆ. ಜನಮತ ಬಿಜೆಪಿ ಪರ ಇರುವುದನ್ನು ತಿಳಿದ ಸಿದ್ದರಾಮಯ್ಯನವರು
ಸ್ಥಿಮಿತ ಕಳಕೊಂಡಂತೆ ವರ್ತಿಸುತ್ತಿದ್ದಾರೆಯೇ? ಎಂಬ ಸಂಶಯ ಜನಸಾಮಾನ್ಯರಲ್ಲಿ ಮುಡಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಪಾಟೀಲ, ಸಂದೀಪ್ ದೇಶಪಾಂಡೆ, ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್. ಸಿದ್ದನಗೌಡರ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ಜಿಲ್ಲಾ ಜಾಲತಾಣದ ಸಂಚಾಲಕ ನಿತೀನ ಚೌಗಲೆ, ವೀರಭದ್ರಯ್ಯ ಪೂಜೇರ, ಸಂತೋಷ ದೇಶನೂರ ಇದ್ದರು.
Join The Telegram | Join The WhatsApp |