Join The Telegram | Join The WhatsApp |
ಬೆಳಗಾವಿ :
ಉದ್ದವ ಠಾಕ್ರೆ ಬಣದ ಶಿವಸೇನೆ ವಕ್ತಾರ ಸಂಜಯ ರಾವತ್ ಸೇರಿದಂತೆ ಹಲವರಿಗೆ ನ್ಯಾಯಾಲಯ ಬಿಗ್ ಶಾಕ್ ನೀಡಿದೆ. ಅದರಲ್ಲೂ ಇತ್ತೀಚೆಗೆ ಜೈಲು ಪಾಲಾಗಿದ್ದ ರಾವತ್ ಪಾಲಿಗೆ ಇದು ಮತ್ತೊಂದು ಸಂಕಷ್ಟ ತಂದಿತ್ತಿದೆ.
ಬೆಳಗಾವಿ ನಾಲ್ಕನೇ ಜೆಎಂಎಫ್ ಸಿ ನ್ಯಾಯಾಲಯ ಡಿಸೆಂಬರ್ 1 ರಂದು ಹಾಜರಾಗುವಂತೆ ಸಂಜಯ ರಾವತ್, ಕಿರಣ ಠಾಕೂರ, ಪ್ರಕಾಶ ಬೆಳಗೋಜಿಗೆ ಸಮನ್ಸ್ ಜಾರಿ ಮಾಡಿದೆ.
ಮಾರ್ಚ್ 30, 2018 ರಂದು, ಬೆಳಗಾವಿಯ ಮರಾಠಿ ವೆಬ್ ಸುದ್ದಿ ವಾಹಿನಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಾಮ್ನಾ ಮರಾಠಿ ಪತ್ರಿಕೆಯ ಸಂಪಾದಕ ಹಾಗೂ ಶಿವಸೇನೆ ವಕ್ತಾರ ಸಂಜಯ ರಾವತ್, ಪತ್ರಕರ್ತ ಪ್ರಕಾಶ ಬೆಳಗೋಜಿ ಮತ್ತು ತರುಣ ಭಾರತ ಸಂಪಾದಕ ಕಿರಣ ಠಾಕೂರ ಅವರು ಭಾಷಾ ವೈಷಮ್ಯ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡು ಇದೀಗ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದೆ.
2018 ರ ಮಾರ್ಚ್ 30 ರಂದು ನಡೆದ ವಾರ್ಷಿಕೋತ್ಸವದಲ್ಲಿ ಭಾಷಾ ಕಲಹ ಉಂಟು ಮಾಡುವ ಭಾಷಣ ಮಾಡಿದ್ದಾರೆ ಎಂಬ ಆರೋಪ ಇವರೆಲ್ಲರ ಮೇಲಿದೆ.
ಟಿಳಕವಾಡಿ ಪೊಲೀಸರು ಸಂಜಯ್ ರಾವತ್, ಕಿರಣ ಠಾಕೂರ ಮತ್ತು ಪ್ರಕಾಶ ಬೆಳಗೋಜಿ ಸೇರಿದಂತೆ ಮೂವರಿಗೆ ಸೆಕ್ಷನ್ 153 ಮತ್ತು 505 (2) ಪ್ರಕಾರ ಪ್ರಕರಣ ದಾಖಲಿಸಿ ಸಮನ್ಸ್ ಜಾರಿ ಮಾಡಲಾಗಿದೆ.
Join The Telegram | Join The WhatsApp |