ಬೆಳಗಾವಿ : ನಮ್ಮ ಮಾತೃಭೂಮಿಯ ಮಹಾನ್ ಪ್ರಾಚೀನ ಭಾಷೆಯನ್ನು ಕಲಿಯಲು, ಬೆಳಗಾವಿ ನಗರದ ಜನರಿಗೆ ಒಂದು ಸುವರ್ಣಾವಕಾಶ. ಕೇವಲ ಹತ್ತು ದಿನಗಳಲ್ಲಿ ಸಂಸ್ಕೃತವನ್ನು ಮಾತನಾಡಲು ಕಲಿಯಬಹುದು. ಸಂಸ್ಕೃತಭಾರತೀ ವತಿಯಿಂದ, ಸಂಭಾಷಣಾ ಶಿಬಿರವನ್ನು ಬೋಗಾರವೆಸ್ ಸಮೀಪದ ಕೇಳಕರ್ ಬಾಗ್ ನಲ್ಲಿರುವ “ಸರಲಂ” ಸಂಸ್ಕೃತ ಭಾರತೀ ಕಾರ್ಯಾಲಯದಲ್ಲಿ ಆಯೋಜಿಸಲಾಗಿದೆ.

ಜೂನ್ 19 ರಿಂದ ಜೂನ್ 28 ರವರೆಗೆ, ಪ್ರತಿದಿನ ಸಂಜೆ 5.00 ರಿಂದ 7.00 ರವರೆಗೆ ತರಗತಿಗಳನ್ನು ನಡೆಸಲಾಗುವುದು.
ಶಿಬಿರ ಸಂಪೂರ್ಣ ಉಚಿತ ಹಾಗೂ ವಯಸ್ಸಿನ ಮಿತಿ ಇರುವುದಿಲ್ಲ. ಸಂಸ್ಕೃತ ಭಾಷೆಯ ಪೂರ್ವಜ್ಞಾನದ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕುಮಾರಿ ತನ್ವಿ ಇನಾಮದಾರ(7090366090).