ಸಂತಿ ಬಸ್ತವಾಡ :
ಸಂತಿ ಬಸ್ತವಾಡ ಗ್ರಾಮದ ದಿ . ಸಂತಿಬಸ್ತವಾಡ ಹಾಲು ಉತ್ಪಾದಕರ ಸಹಕಾರಿ ಸಂಘ, ಕೆ ಎಮ್ ಎಫ್ ಬೆಳಗಾವಿ, ಕಿಣಯೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಂದಾದೀಪ ಕಣ್ಣಿನ ಆಸ್ಪತ್ರೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಕಣ್ಣಿನ ಮತ್ತು ಬಿಪಿ, ಶುಗರ್ ತಪಾಸಣೆಯ ಉಚಿತ ಆರೋಗ್ಯ ಶಿಬಿರ ನಡೆಯಿತು.

250 ಜನರು ಕಣ್ಣಿನ ತಪಾಸಣೆ ಮಾಡಿಕೊಂಡರು. 150 ಕ್ಕಿಂತಲೂ ಹೆಚ್ಚಿನ ಜನರು ಬಿಪಿ ಮತ್ತು ಶುಗರ್ ತಪಾಸಣೆ ಮಾಡಿಸಿಕೊಂಡು ಉಚಿತ ಔಷಧಿಯನ್ನು ಪಡೆದುಕೊಂಡರು. ನಂದಾದೀಪ ಕಣ್ಣಿನ ಆಸ್ಪತ್ರೆಯ ವೈದ್ಯರು ಕಣ್ಣಿನ ತಪಾಸಣೆಯನ್ನು ಮಾಡಿ, ಸಲಹೆ-ಸೂಚನೆ ನೀಡಿದರು. ರಿಯಾಯಿತಿ ದರದಲ್ಲಿ ಕನ್ನಡಕವನ್ನು ವಿತರಿಸಿದರು.

ಕಿಣಯೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತೆಯರು ಮತ್ತು ಸಿಎಚ್ ಒ ಅವರು ಬಿಪಿ ಮತ್ತು ಶುಗರ್ ತಪಾಸಣೆ ಮಾಡಿ ಉಚಿತವಾಗಿ ಔಷಧಿಯನ್ನು ನೀಡಿದರು.

ಟಿಬಿ ರೋಗದ ಬಗ್ಗೆ ಮಾಹಿತಿ ನೀಡಿದರು. ದಿ. ಸಂತಿಬಸ್ತವಾಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಭರ್ಮಾ ಗುಡುಂಕೇರಿ, ಉಪಾಧ್ಯಕ್ಷ ನಾಗೇಂದ್ರ ಸಿದ್ದನ್ನವರ ಮತ್ತು ಆಡಳಿತ ಮಂಡಳಿಯ ಸದಸ್ಯರು, ಕೆ ಎಂ ಎಫ್ ನ ಶೋಭಾ ಹುದ್ದಾರ, ಶ್ಯಾಮಲಾ, ಕಿಣಯೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಶೋಕ ಕೋರೆ ಮತ್ತು ಆರೋಗ್ಯ ಕಾರ್ಯಕರ್ತೆ ಜುಬೇದಾ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.