This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ವಿಜೃಂಭಣೆಯಿಂದ ನಡೆದ ಸಂತಿ ಬಸ್ತವಾಡ ಸಂತ ಜೋಸೆಫರ ಆರ್ಪನೇಜ್ ಪ್ರೌಢಶಾಲೆ ಸುವರ್ಣ ಮಹೋತ್ಸವ 

Join The Telegram Join The WhatsApp

ಬೆಳಗಾವಿ :

ಸಂತಿಬಸ್ತವಾಡ ಗ್ರಾಮದ ಸಂತ ಜೋಸೆಫರ ಆರ್ಪನೇಜ್ ಪ್ರೌಢಶಾಲೆ ಸುವರ್ಣ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಸ್ಯಾಲಿ ಬಿ.ಎಸ್ ( ಪ್ರಾಂತ್ಯಾಧಿಕಾರಿಗಳು ಬೆಥನಿ ಪಶ್ಚಿಮ ಪ್ರಾಂತ್ಯ ಧಾರವಾಡ) ಇವರು ಸಂತ ಜೊಸೆಫ್ ಓರ್ಪನೇಜ್ ಹೈಸ್ಕೂಲ್ ಇದು ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಾಲೆ ಆಗಿದೆ. ಈ ಶಾಲೆಗೆ ಸುತ್ತ ಮುತ್ತಲಿನ ಗ್ರಾಮ ಗಳಲ್ಲದೇ ಸಮೀಪದ ಪೀರನವಾಡಿ, ಮಜಗಾವಿ ಮತ್ತು ಬೆಳಗಾವಿಯಿಂದಲೂ ಮಕ್ಕಳು ಬಂದು ಶಿಕ್ಷಣ ಪಡೆಯುತ್ತಿದ್ದಾರೆ. ಈ ಶಾಲೆಯು ಕ್ರೀಡಾ ಕೂಟಗಳಲ್ಲಿ, ಆಟ ಪಾಠಗಳಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಶಿಕ್ಷಣ ಪಡೆದ ಮಕ್ಕಳು ಅನೇಕ ಅತ್ಯುನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಥನಿ ಸಂಸ್ಥೆಯು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡಿ ಸಮಾಜವನ್ನು ಅಭಿವೃದ್ಧಿ ಪಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ ಎಂದು ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಭರ್ಮಾ ದುರ್ಗಪ್ಪಾ ಗುಡುಂಕೇರಿ, ಈ ಶಾಲೆಯು ಈ ಗ್ರಾಮದ ಮೂಗುತಿಯಾಗಿದ್ದು, ಇದರಿಂದ ಸಂತಿಬಸ್ತವಾಡ ಗ್ರಾಮವನ್ನು ಗುರುತಿಸುತ್ತಾರೆ. ಕಾರಣ ಇಲ್ಲಿ ಮಕ್ಕಳಿಗೆ ಸಿಗುತ್ತಿರುವ ಗುಣಾತ್ಮಕ ಶಿಕ್ಷಣ ಮತ್ತು ಮಕ್ಕಳನ್ನು ಭಾರತದ ಒಳ್ಳೆಯ ನಾಗರಿಕರನ್ನಾಗಿ ರೂಪಿಸುವಲ್ಲಿ ತನ್ನದೇ ಆದಂತಹ ಕೊಡುಗೆಯನ್ನು ನೀಡುತ್ತಿರುವುದು. ಬೆಥನಿ ಸಂಸ್ಥೆಯ ಸಿಸ್ಟರಗಳು ಅನಾಥ, ದೀನ ದಲಿತ, ನಿರ್ಗತಿಕ, ಬಡ ವರ ಮಕ್ಕಳಿಗೆ ತಮ್ಮ ಮಕ್ಕಳು ಎಂದು ತಿಳಿದು ಶಿಕ್ಷಣವನ್ನು ನೀಡುತ್ತಿದ್ದಾರೆ. ಸಮಾಜವನ್ನು ಸುಶಿಕ್ಷಿತವನ್ನಾಗಿ ಮಾಡಲು ತಮ್ಮ ಜೀವನವನ್ನು ಸಮರ್ಪಿಸುತ್ತಿದ್ದಾರೆ. ಅವರ ಸಮಾಜ ಸೇವೆಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಈ ಶಾಲೆಯನ್ನು 1973ರಲ್ಲಿ ಪ್ರಾರಂಭಿಸಿದ ಫಾದರ್ ಜೆ. ಬಿ. ಡಿಸಿಲ್ವಾರವರನ್ನು ಸ್ಮರಿಸಿದರು.

ಗ್ರಾಪಂ ಸದಸ್ಯ ಬಸಪ್ಪ ಬೀರಮುತ್ತ ಮಾತನಾಡಿ, ಈ ಶಾಲೆಯು ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಿದೆ. ಈ ಶಾಲೆಯು ಸಂತಿಬಸ್ತವಾಡ ಗ್ರಾಮದ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದೆ. ಆದ್ದರಿಂದ ಈ ಶಾಲೆಗೆ ಯಾವುದೇ ರೀತಿಯ ಸಹಾಯ ಒದಗಿಸಲು ನಮ್ಮೂರು ಮತ್ತು ಗ್ರಾಮ ಪಂಚಾಯತದಿಂದ ಸಿದ್ದರಿದ್ದೇವೆ ಎಂದು ಹೇಳಿದರು. ಶಾಲೆಯಲ್ಲಿ 50 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕರು ಹಾಗೂ ಪ್ರತಿಬಾನ್ವಿತ ಮಕ್ಕಳಿಗೆ ಸಿಸ್ಟರ ಲವಿನಾ ಬಿ ಎಸ್ ( ಮುಖ್ಯ ಶಿಕ್ಷಕರು, ಸಂತ ಜೊಸೆಫ್ಸ ಓರ್ಪನೇಜ ಹೈಸ್ಕೂಲ್) ಸತ್ಕರಿಸಿ ಉಡುಗೊರೆಗಳನ್ನು ಕೊಟ್ಟರು. ಸಿಸ್ಟರ್ ಸ್ಯಾಲಿ ಬಿ.ಎಸ್ ಮತ್ತು ದ್ಯಾಮಣ್ಣಾ ನಾಯಕ ಗ್ರಾಮ ಪಂಚಾಯತ್ ಅಧ್ಯಕ್ಷರು ಸಂತಿಬಸ್ತವಾಡ ಇವರು ಶಾಲೆಯ ಸುವರ್ಣ ಮಹೋತ್ಸವದ ನಾಮಫಲಕ ಉದ್ಘಾಟಿಸಿದರು.

ಫಾದರ್ ಪ್ರದೀಪ ಕೊರೆಯ ಆಶೀರ್ವಚನ ನುಡಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ದಯಾನಂದ ಹಂಚಿನಮನಿ ಮಾತನಾಡಿದರು. ಅಂತೋನಿ ಡಿಸೋಜಾ, ಓಮಣ್ಣಾ ಬಸ್ತವಾಡ್ಕರ ಗ್ರಾಮ ಪಂಚಾಯತ ಸದಸ್ಯರುಗಳು ಭಾಗವಹಿಸಿದ್ದರು. ಶಾಲಾ ಮಕ್ಕಳು, ಶಿಕ್ಷಕರು, ಪಾಲಕರು ಮತ್ತು ಗ್ರಾಮಸ್ಥರು ಬಹು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಿಸ್ಟರ್ ಲವೀನಾ ಬಿ. ಎಸ್ ರವರು ಸ್ವಾಗತಿಸಿದರು. ಇವಲಿನ ಟೀಚರ್ ವಂದಿಸಿದರು.


Join The Telegram Join The WhatsApp
Admin
the authorAdmin

Leave a Reply