ಬೆಳಗಾವಿ:
ಬೆಳಗಾವಿಯ ಸಿಪಿಎಸ್‌ ಮೈದಾನದಲ್ಲಿ ನಡೆದ 11ನೇ ಸತೀಶ್ ಶುಗರ್ಸ್ ಕ್ಲಾಸಿಕ್ ರಾಜ್ಯ ಮತ್ತು ರಾಷ್ಟ್ರಮಟ್ಟದ ದೇಹದಾಡ್ಯ ಸ್ಪರ್ಧೆಯಲ್ಲಿ ಸತೀಶ ಶುಗರ್ಸ್ ಕ್ಲಾಸಿಕ್ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಹರಿಯಾಣದ ನಿತೀನ್‌ ಚಾಂಡಿಲಾ ನಗದು ಸೇರಿದಂತೆ ಪ್ರಶಸ್ತಿ ಪಡೆದರು.
1ನೇ ರನ್ನರ ಆಪ್‌‌ ಎನ್‌. ಸರ್ಬೋ ಸಿಂಗ್‌ ನಗದು ಸೇರಿದಂತೆ ಪ್ರಶಸ್ತಿ ಪಡೆದರು. 2ನೇ ರನ್ನರ ಆಪ್‌‌ ಕರ್ನಾಟಕದ ಧನರಾಜ್ ಪ್ರಶಸ್ತಿ ಪಡೆದರು. ಬೆಸ್ಟ್ ಪೋಸರ್ ಆಗಿ ಎನ್‌. ಸರ್ಬೋ ಸಿಂಗ್‌ ವಿಜೇತರಾದರು ಹಾಗೂ ಟೀಮ್ ಚಾಂಪಿಯನ್ ಆಗಿ ಮಹಾರಾಷ್ಟದ ರಾಜ್ಯವು ಪ್ರಶಸ್ತಿ ಪಡೆಯಿತು.

55 ಕೆ.ಜಿ ವಿಭಾಗದ: ಮಹಾರಾಷ್ಟ್ರದ ಸಂತೋಷ ಬಾವರ್‌ ಯಾದವ್‌ ಪ್ರಥಮ, ತಮಿಳುನಾಡಿನ ಆರ್‌. ಗೋಪಾಲಕೃಷ್ಣ ದ್ವಿತೀಯ, ಮಹಾರಾಷ್ಟ್ರದ ಅರುಣ ಪಾಟೀಲ್‌ ತೃತೀಯ, ಮಹಾರಾಷ್ಟ್ರದ ರಮೇಶ ಕೃಷ್ಣ ಜಾಧವ 4ನೇ ಸ್ಥಾನ ಹಾಗೂ ಉತ್ತರಪ್ರದೇಶದ ಜಿತೇಂದ್ರ ಸಿಂಗ್‌ 5ನೇ ಸ್ಥಾನ ಪಡೆದರು.

60 ಕೆ.ಜಿ. ವಿಭಾಗ: ಮಹಾರಾಷ್ಟ್ರದ ನಿತೀನ್‌ ಮಾತ್ರೆ ಪ್ರಥಮ, ಮಹಾರಾಷ್ಟ್ರದ ಅವಿನಾಶ ಪಾಟೀಲ್ ದ್ವಿತೀಯ, ಪಶ್ಚಿಮ್‌ ಬಂಗಾಳನ ವಾಸ್ಕರ್‌ ಮಂಡೋಲಾ ತೃತೀಯ, ತಮಿಳುನಾಡಿನ ವಿಗ್ನೇಶ ಟಿ.ವಿ. 4ನೇ ಸ್ಥಾನ, ಗೋವಾದ ರಜತ್‌ ಕರಾಪುರಕರ 5ನೇ ಸ್ಥಾನ ಪಡೆದಿದ್ದಾರೆ.

65 ಕೆ.ಜಿ. ವಿಭಾಗ: ಅಸ್ಸಾಂನ ಕಾಸಿರ ಅಲಿ ಪ್ರಥಮ, ಮಹಾರಾಷ್ಟ್ರದ ಬಾಪನ್‌ ನಕುಲದಾದ್‌ ದ್ವಿತೀಯ, ಬೋರ್ಡಾದ ವೈಭವ್‌ ಮಹಾಜನ ತೃತೀಯ, ತಮಿಳುನಾಡಿನ ಜಯಪ್ರಕಾಶ ತಂಗದುರೆ 4ನೇ ಸ್ಥಾನ, ಕರ್ನಾಟಕದ ಆಕಾಶ ಆರ್‌, 5ಸ್ಥಾನ ಪಡೆದಿದ್ದಾರೆ.

70 ಕೆ.ಜಿ. ವಿಭಾಗ: ಮಹಾರಾಷ್ಟ್ರದ ಪಂಚಾಕ್ಷರಿ ಲೋನಾರ ಪ್ರಥಮ, ರೇಲ್ವೆ ಪ್ರಚಾರ ಬೋರ್ಡಿನ ಪ್ರತೀಕ ಪಂಚಾಲ ದ್ವಿತೀಯ, ಕರ್ನಾಟಕದ ಪ್ರತಾಪ ಕಲಕುಂದ್ರಿಕರ ತೃತೀಯ, ಆಂಧ್ರಪ್ರದೇಶ ಜಿ ಬಾಸ್ಕರ್‌ ರಾವ್‌ 4ನೇ ಸ್ಥಾನ, ತೆಲೆಂಗಾನದ ಮೊಹ್ಹದ ಕಲೀದ್‌ 5ನೇ ಸ್ಥಾನ ಪಡೆದಿದ್ದಾರೆ.

75 ಕೆ.ಜಿ. ವಿಭಾಗ: ರೇಲ್ವೇ ಕ್ರೀಡೆ ಪ್ರಚಾರ ಬೋರ್ಡ್‌ ರಕ್ಷಿತ್‌ ಕೋಟೆನ್‌ ಪ್ರಥಮ, ಕರ್ನಾಟಕದ ಆರ್.‌ ಶಶಿಕಾಂತ ದ್ವಿತೀಯ, ರೇಲ್ವೇ ಕ್ರೀಡೆ ಪ್ರಚಾರ ಬೋರ್ಡ್‌ನ್‌ ಟಿ. ರಾಮಕೃಷ್ಣ ತೃತೀಯ, ಪಂಜಾಬಿನ ಹ್ಯಾಪಿ 4ನೇ ಸ್ಥಾನ, ಪಂಚಿನ ಬಂಗಾಲ ಬಿಸ್ವಾಜಿತ್‌ ತಾಪಾ 5ನೇ ಸ್ಥಾನ ಪಡೆದರು.

80 ಕೆ.ಜಿ. ವಿಭಾಗ: ಕರ್ನಾಟಕದ ಧನರಾಜ್‌ ಪ್ರಥಮ, ರೇಲ್ವೇ ಕ್ರೀಡೆ ಪ್ರಚಾರ ಬೋರ್ಡ್‌ ಚಿಂದಾ ರಾಹುಲ್‌ ದ್ವಿತೀಯ, ಕರ್ನಾಟಕದ ಪ್ರಶಾಂತ ಕನ್ನುಕರ ತೃತೀಯ, ತಮಿಳುನಾಡಿನ ಎನ್‌ ಪಾಂಡಿಯನ್‌ 4ನೇ ಸ್ಥಾನ, ಮಹಾರಾಷ್ಟ್ರದ ರೋಹನ ದೂರಿ 5ನೇ ಸ್ಥಾನ ಪಡೆದಿದ್ದಾರೆ.

85 ಕೆ.ಜಿ. ವಿಭಾಗ: ರೇಲ್ವೇ ಕ್ರೀಡೆ ಪ್ರಚಾರ ಬೋರ್ಡ್‌ನ ಎನ್‌ ಸರ್ಬೋ ಸಿಂಗ್‌ ಪ್ರಥಮ, ಮಹಾರಾಷ್ಟ್ರದ ಅಸತೋಷ ಸಹಾ ದ್ವಿತೀಯ, ತಮಿಳುನಾಡಿನ ಸರ್ವನನ್‌ ಮನಿ ತೃತೀಯ, ಪಶ್ಚಿಮಬಂಗಾಲದ ಡೆಲಬೆಲ್‌ ಮಲ್ಲಿಕ್‌ 4ನೇ ಸ್ಥಾನ, ಕೇರಳದ ಅಕ್ಷಯ ಕೃಷ್ಣಾ ಬಿ 5ನೇ ಸ್ಥಾನ ಪಡೆದಿದ್ದಾರೆ.

90 ಕೆ.ಜಿ. ವಿಭಾಗ: ಕರ್ನಾಟಕದ ಮಂಜುನಾಥ ಎಸ್‌, ಪ್ರಥಮ, ಉತ್ತರ ಪ್ರದೇಶ ದೇವೆಂದ್ರಪಾಲ್‌ ದ್ವಿತೀಯ, ಮಹಾರಾಷ್ಟ್ರದ ಚೇಧತನ ನಾಯಿಕ್‌ ತೃತೀಯ, ತಮಿಳುನಾಡಿನ ಶನ್ಮುಗೇಷ 4ನೇ ಸ್ಥಾನ, ಕರ್ನಾಟಕದ ಗೌಥಮ್‌ 5ನೇ ಸ್ಥಾನ ಪಡೆದಿದ್ದಾರೆ.

90-100 ಕೆ.ಜಿ. ವಿಭಾಗ: ಕೇಂದ್ರ ಆಧಾಯ ಕ್ರೀಡೆಗಳು ಮತ್ತು ಸಂಸ್ಕೃತಿಕ ಬೋರ್ಡಿನ ಆರ್.‌ ಕಾರ್ತಿಕಕೇಶ್ವರ ಪ್ರಥಮ, ಜಾರ್ಕಂಡಿನ ಪ್ರಶಾಂತ ಕುಮಾರ ಸಿಂಗ್‌ ದ್ವಿತೀಯ, ಮಧ್ಯಪ್ರದೇಶಿನ ಪ್ರದೀಪ ಠಾಗೂರು ತೃತೀಯ, ಕರ್ನಾಟಕ ಅಶವಂತ ಸುಜಾನ್‌ 4ನೇ ಸ್ಥಾನ, ಮಹಾರಾಷ್ಟ್ರದ ನಿಲಕಂಠ ಸವಾಸೆ 5ನೇ ಸ್ಥಾನ ಪಡೆದಿದ್ದಾರೆ.

100 ಕೆ.ಜಿ. ವಿಭಾಗ: ಹರಿಯಾಣದ ನಿತೀನ ಚಾಂಡಿಲಾ ಪ್ರಥಮ, ಮಹಾರಾಷ್ಟ್ರದ ನಿಲೇಶ ದಗಾಡೆ ದ್ವಿತೀಯ, ರೇಲ್ವೇ ಕ್ರೀಡೆ ಪ್ರಚಾರ ಬೋರ್ಡ್‌ನ ಜೈಕುಮಾರ ವಿ,ತೃತೀಯ, ಉತ್ತರ ಪ್ರದೇಶದ ಮನೋಜ ಅಗ್ನಿಹೊತ್ರಿ 4ನೇ ಸ್ಥಾನ, ಮಧ್ಯಪ್ರದೇಶ ಅನಮೋಲ್‌ ತಿವಾರಿ 5ನೇ ಸ್ಥಾನ ಪಡೆದಿದ್ದಾರೆ. ಬೆಸ್ಟ್ ಪೋಸರ್ ಆಗಿ ಎನ್‌. ಸರಬೋಸಿಂಗ್‌ಗೆ 25.000 ನಗದು ಸೇರಿದಂತೆ ಪ್ರಶಸ್ತಿ ನೀಡಲಾಯಿತು. ‌

ಯುವ ನಾಯಕ ರಾಹುಲ್ ಜಾರಕಿಹೊಳಿ, ಶಾಸಕ ರಾಜು (ಆಸೀಪ್) ಸೇಠ್, ಸಿರೀಶ್‌ ಗೋಘಾಟೆ, ಅವಿನಾಶ್ ಪೊದ್ದಾರ್, ಅಜಿತ್ ಸಿದ್ದಣ್ಣನವರ್, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ಡಾ. ರವಿ ಪಾಟೀಲ್, ಚೇತನ್ ಪತಾರೆ, ತುಳಸಿ ಸುಝೈನ್, ಪ್ರೇಮಚಂದ್ ಡಿಗ್ರಾ, ಟಿ.ವಿ.ಪೋಲಿ, ರಿಯಾ ಚೌಗಲಾ, ಮನೋಜ್ ಮೈಚೆಲ್ ಜೈದೀಪ್ ಸಿದ್ದಣ್ಣನವರ್, ಸಂತೋಷ ಪಾಟೀಲ ಡಾ. ಹಿರಾಲ್ ಸೇಠ್, ರವಿ ಉಳ್ಳಾಗಡ್ಡಿ ಸೇರಿದಂತೆ ಅನೇಕ ಮುಖಂಡರು ಇದ್ದರು.


ವಿಜೇತರಿಗೆ ನಗದು ಸೇರಿದಂತೆ ಪ್ರಶಸ್ತಿ ವಿತರಣೆ: ರಾಷ್ಟ್ರಮಟ್ಟದ ದೇಹದಾಡ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹರಿಯಾನಾದ ನಿತೀನ್‌ ಚಾಂಡಿಲಾಗೆ 3.55000 ನಗದು ಸೇರಿದಂತೆ ಪ್ರಶಸ್ತಿ ನೀಡಲಾಯಿತು. 1ನೇ ರನ್ನರ ಆಪ್‌‌ ಮಹಾರಾಷ್ಟ್ರದ ಎನ್‌. ಸರ್ಬೋ ಸಿಂಗ್‌ಗೆ 1.50.000 ನಗದು ಸೇರಿದಂತೆ ಪ್ರಶಸದತಿ ನೀಡಲಾಯಿತು. 2ನೇ ರನ್ನರ ಆಪ್‌‌ ಕರ್ನಾಟಕದ ಧನರಾಜ್ ಗೆ 1 ಲಕ್ಷ ರೂ. ನಗದು ಸೇರಿದಂತೆ ಪ್ರಶಸ್ತಿ ನೀಡಲಾಯಿತು. ಈ ಭಾರಿ ಬೆಳಗಾವಿಯ ಸಿಪಿಎಸ್‌ ಮೈದಾನದಲ್ಲಿ ನಡೆದ 11ನೇ ಸತೀಶ್ ಶುಗರ್ಸ್ ಕ್ಲಾಸಿಕ್ ರಾಷ್ಟ್ರಮಟ್ಟದ ದೇಹದಾಡ್ಯ ಎಲ್ಲ ಸ್ಪರ್ಧೆ ವಿಜೇತರಿಗೆ ಒಟ್ಟಾರೆಯಾಗಿ 23 ಲಕ್ಷ ನಗದು ನೀಡಲಾಗಿದೆ ಎಂದು ಸಂಘಟಿಕರು ತಿಳಿದ್ದಾರೆ.