
ಸತೀಶ ಜಾರಕಿಹೊಳಿ ರಾಜ್ಯದ ಅತ್ಯಂತ ಪ್ರಭಾವಿ ಸಚಿವರು. ಯಾವುದೇ ಖಾತೆ ಇರಲಿ, ಅದರಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡುವ ಮೂಲಕ ಗಮನ ಸೆಳೆದವರು ಅವರು. ರಾಜ್ಯದ ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮದ ದಿನ. ಇಡೀ ರಾಜ್ಯದಲ್ಲಿ ಹರಡಿರುವ ಅವರ ಅಭಿಮಾನಿಗಳು ಪಕ್ಷ ಬೇಧ ಇಲ್ಲದೆ ತಮ್ಮ ಅಚ್ಚುಮೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಎಲ್ಲೆಡೆ ಆಚರಿಸುತ್ತಿದ್ದಾರೆ. ಜೊತೆಗೆ ಈ ಹೆಮ್ಮೆಯ ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯಗಳು ಮಹಾಪೂರವನ್ನೇ ಹರಿಸುತ್ತಿರುವುದು ವಿಶೇಷವಾಗಿದೆ.
ಕರ್ನಾಟಕದ ಅತಿ ಪ್ರಭಾವಿ ರಾರಾಜಕಾರಣಿಯಾಗಿಜಕಾರಣಿಯಾಗಿ ದಿನೇ ದಿನೇ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಿರುವ ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಇಂದು ಜನುಮದಿನದ ಸಂಭ್ರಮ. ತೆರೆಯ ಮರೆಯಲ್ಲಿ ಅಭಿವೃದ್ದಿ ಕೆಲಸ- ಕಾರ್ಯಗಳನ್ನು ಸದ್ದಿಲ್ಲದೆ ಮಾಡುವ ಮೂಲಕ ಜನಮಾನಸದಲ್ಲಿ ಅಚ್ಚೊತ್ತಿರುವ ಸತೀಶ ಜಾರಕಿಹೊಳಿ ಅವರು 2028 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೊಂದು ಅವಧಿಗೂ ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗಿ ಕರ್ನಾಟಕವನ್ನು ತಮ್ಮ ಸಾರಥ್ಯದಲ್ಲಿ ಮುನ್ನಡೆಸುವ ಕನಸು ಕಂಡಿದ್ದಾರೆ.
ಈ ನಿಟ್ಟಿನಲ್ಲಿ ಅವರು ತಮ್ಮ ಕನಸು ಸಾಕಾರಗೊಳಿಸುವತ್ತ ಮುನ್ನಡೆದಿದ್ದು ಸದ್ಯದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.
ವಿಧಾನಪರಿಷತ್ ಸದಸ್ಯರಾಗಿ ಆರಂಭದಲ್ಲಿ ರಾಜಕಾರಣ ಆರಂಭಿಸಿದ ಸತೀಶ ಜಾರಕಿಹೊಳಿ ಅವರು ನಂತರದ ದಿನಗಳಲ್ಲಿ ವಿಧಾನಸಭಾ ಸದಸ್ಯರಾಗಿ ಜನತೆಗೆ ಅತಿ ಹತ್ತಿರವಾಗಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಅತ್ಯಂತ ಪ್ರಭಾವಿ ಸಚಿವರಾಗಿರುವ ಅವರು ರಾಜ್ಯದ ಉದ್ದಗಲಕ್ಕೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು ಎಲ್ಲಾ ಜನಪ್ರತಿನಿಧಿಗಳ ಜೊತೆ ಸ್ನೇಹಪರ ನಂಟು ಹೊಂದಿದ್ದಾರೆ. ಪಕ್ಷಭೇದವಿಲ್ಲದೆ ಕೆಲಸ ಕಾರ್ಯಗಳನ್ನು ಮಾಡಿ ಕೊಡುವ ಮೂಲಕ ಅವರು ತಾವು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಪಕ್ಷವಲ್ಲದೆ ಬಿಜೆಪಿ, ಜೆಡಿಎಸ್, ಪಕ್ಷೇತರರ ಒಲವು ಗಳಿಸುವಲ್ಲಿ ಯಶಸ್ಸು ಸಾಧಿಸಿದ್ದಾರ.
ಅದರಲ್ಲೂ ಬೆಳಗಾವಿ ಜಿಲ್ಲೆಯ ಖಾನಾಪುರ ಬಿಜೆಪಿ ಶಾಸಕ ವಿಠಲ ಹಲಗೇಕರ ಅವರು ಸಾರ್ವಜನಿಕವಾಗಿ ಸತೀಶ ಜಾರಕಿಹೊಳಿ ಅವರನ್ನು ಮುಕ್ತ ಕಂಠದಿಂದ ಕೊಂಡಾಡಿದ್ದಾರೆ. ಅವರ ಕೆಲಸ ಕಾರ್ಯಗಳು ಪಕ್ಷಕ್ಕೆ ಸೀಮಿತವಾಗಿಲ್ಲ, ಕೇವಲ ಅಭಿವೃದ್ದಿ ದೃಷ್ಟಿಯಿಂದ ಸತೀಶ ಜಾರಕಿಹೊಳಿ ಅವರು ಕೆಲಸ ಮಾಡುವ ಜನನಾಯಕರು ಎಂದು ಹೊಗಳಿರುವುದು ಅವರ ಶ್ರೇಷ್ಠ ನಾಯಕತ್ವಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು.
ಮೊದಲಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸತೀಶ ಜಾರಕಿಹೊಳಿ ಅವರು ಕಾಂಗ್ರೆಸ್ ನಾಯಕರಲ್ಲಿ ಅತಿ ಬಲಿಷ್ಠ ನಾಯಕರಾಗಿ ಬೆಳೆದು ನಿಂತಿದ್ದಾರೆ. ಪಕ್ಷದ ಹೈಕಮಾಂಡ್ ಜೊತೆ ಅತ್ಯುತ್ತಮ ಒಡನಾಟ ಹೊಂದಿರುವ ಅವರು ಪ್ರತಿಯೊಬ್ಬ ನಾಯಕರು ಹಾಗೂ ಕಾರ್ಯಕರ್ತರ ಜೊತೆ ಸುಮಧುರ ಬಾಂಧವ್ಯವನ್ನು ಹೊಂದಿದ್ದಾರೆ.
ಬೆಳಗಾವಿ ಜಿಲ್ಲೆ ಈ ಹಿಂದೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಆದರೆ, ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಸಂಖ್ಯೆ ಕ್ಷೀಣವಾಗತೊಡಗಿತು. ಅದನ್ನು ಗಮನಿಸಿದ ಅವರು ತಮ್ಮ ಮಾತೃ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗತವೈಭವ ತಂದು ಕೊಡುವ ನಿಟ್ಟಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ತಮ್ಮೆಲ್ಲ ಶಕ್ತಿಯನ್ನು ಕ್ರೋಢೀಕರಿಸಿ ಅತ್ಯಂತ ದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಾಸಕರನ್ನು ಗೆಲ್ಲಿಸಿ ಕೊಂಡು ಬರುವ ಮೂಲಕ ತಮ್ಮ ವರ್ಚಸ್ಸನ್ನು ಸಾಬೀತುಪಡಿಸಿದರು. ಬರುವ ದಿನಗಳಲ್ಲೂ ಈ ದಿಗ್ವಿಜಯ ಮುಂದುವರಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬೆಳಗಾವಿ ಜಿಲ್ಲೆ ಮಾತ್ರವಲ್ಲ, ರಾಜ್ಯದ ಉದ್ದಗಲಕ್ಕೂ ಹಿಡಿತ ಸಾಧಿಸಿರುವ ಅವರು ಯಾವುದೇ ವಿವಾದಾಸ್ಪದ ಗೊಂದಲಗಳಿಗೆ ತುತ್ತಾಗುವವರಲ್ಲ.
ಅತ್ಯಂತ ತೂಕಬದ್ಧವಾಗಿ ಮಾತನಾಡುವ ಅವರ ಮಾತಿಗೆ ರಾಜ್ಯದ ಜನತೆ ಆಗಾಗ ಸಾರ್ವಜನಿಕವಾಗಿ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಹಿಡಿದ ಕೆಲಸ ಮುಗಿಸದೆ ಬಿಡುವವರಲ್ಲ ಎಂಬ ಈ ಛಲದಂಕ ಮಲ್ಲ ಈಗಾಗಲೇ ಹೆಚ್ಚಿನ ಖಾತೆಗಳನ್ನು ನಿಭಾಯಿಸಿ ಉತ್ತಮ ಕೆಲಸಗಾರ ಎಂದು ಕರೆದುಕೊಂಡಿದ್ದಾರೆ. ಕೇಂದ್ರ ಸರಕಾರದ ಮಟ್ಟದಲ್ಲೂ ಕೆಲಸಗಳನ್ನು ಮಾಡಿಸಿಕೊಂಡು ಬರುವ ರಾಜ್ಯದ ಏಕೈಕ ಸಚಿವರೆಂದರೆ ಅದು ಸತೀಶ್ ಮಾತ್ರ. ಮಾಸ್ಟರ್ ಮೈಂಡ್ ಎಂದೇ ರಾಜ್ಯದ ರಾಜಕಾರಣದಲ್ಲಿ ಛಾಪು ಮೂಡಿಸಿರುವ ಸತೀಶ ಜಾರಕಿಹೊಳಿ ಅವರು ಪ್ರಚಾರದಿಂದ ಬಹುದೂರ. ಅವರು ಎಂದು ಸಾರ್ವಜನಿಕವಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡವರಲ್ಲ. ಸಾರ್ವಜನಿಕವಾಗಿ ಹುಟ್ಟು ಹಬ್ಬ ಆಚರಿಸದಂತೆ ಅವರು ತಮ್ಮ ಅಪಾರ ಅಭಿಮಾನಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದರೂ ಸಹ ಅಭಿಮಾನಿಗಳ ಪ್ರೀತಿ ಮಾತ್ರ ತಮ್ಮ ಅಚ್ಚುಮೆಚ್ಚಿನ ನಾಯಕನ ಹರಿದು ಬರುತ್ತದೆ.ಜೂನ್ 1 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬೆಳಗಾವಿ ಜಿಲ್ಲೆಯ ಈ ಹೆಮ್ಮೆಯ ನಾಯಕ ಭವಿಷ್ಯದ ಶ್ರೇಷ್ಠ ಜನನಾಯಕರಾಗಿ ಹೊರಹೊಮ್ಮಲಿ. ಬೆಳಗಾವಿ ಜಿಲ್ಲೆಯ ಚೊಚ್ಚಲ ಮುಖ್ಯಮಂತ್ರಿ ಹುದ್ದೆ ಸತೀಶ ಜಾರಕಿಹೊಳಿ ಅವರಿಗೆ ಒಲಿದು ಬರಲಿ ಎನ್ನುವುದು ಜಿಲ್ಲೆಯ ಸಮಸ್ತ ಜನತೆಯ ಅಭಿಲಾಷೆಯಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಅವರ ಕನಸು ಈಡೇರುವ ಸುವರ್ಣ ಅಧ್ಯಾಯವಾಗಿದ್ದು ಅವರ ನವ ಕರ್ನಾಟಕ ಕಟ್ಟುವ ಕನಸು ಈಡೇರುವಂತಾಗಲಿ ಎನ್ನುವುದು ಎಲ್ಲರ ಬಯಕೆಯಾಗಿದೆ.