ಬೆಳ್ವೆ: ಪ್ರತಿಷ್ಠಿತ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಗೆ ಭಾನುವಾರ ವೇದಿಕೆ ಸಜ್ಜಾಗಿದೆ. ಕೆಲವೇ ದಿನಗಳಲ್ಲಿ ಮತದಾರರ ಮನ ಗೆಲ್ಲುವಲ್ಲಿ ಯುವ ಧುರೀಣ ಸತೀಶ್ ಕುಮಾರ್ ಶೆಟ್ಟಿ ಅವರು ಯಶಸ್ವಿಯಾಗಿದ್ದು ಈ ಸಲ ನಡೆಯುವ ಸಂಘದ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಲು ಅವರು ಸಜ್ಜಾಗಿದ್ದಾರೆ.

ರಾಜಕೀಯ ಮತ್ತು ಸಹಕಾರಿ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅವರು ಜನಪರ ಧೋರಣೆ ತಡೆದಿರುವ ನಿಷ್ಠಾವಂತ ನಾಯಕರಾಗಿದ್ದಾರೆ. ಈ ಸಲದ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮತದಾರರು ತಮಗೆ ಬೆನ್ನೆಲುಬಾಗಿ ನಿಲ್ಲುವ ಮೂಲಕ ನನ್ನ ಗೆಲುವಿಗೆ ಕಾರಣಿಕರ್ತರಾಗಬೇಕು, ನನ್ನ “ಕ್ರಮ ಸಂಖ್ಯೆ 9 ಆಗಿದೆ. ಕಟ್ಟಿಂಗ್ ಪ್ಲಯರ್ ” ಚಿಹ್ನೆ ಹೊಂದಿರುವ ನನ್ನನ್ನು ಗೆಲ್ಲಿಸಿ ಆರಿಸಿ ಕಳಿಸಿದರೆ ಸಹಕಾರಿ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸುದಾಗಿ ಅವರು ವಾಗ್ದಾನ ಮಾಡಿದ್ದಾರೆ.

ಸಹಕಾರಿ ರಂಗಕ್ಕೆ ಕೊಡುಗೆ :
ಸುಮಾರು ಎರಡೂವರೆ ದಶಕಗಳ ಕಾಲ ಕುಂದಾಪುರ ತಾಲೂಕಿನ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಪ್ರಭಾಕರ ಶೆಟ್ಟಿ ವೈ. ಅವರು ಅಪಾರ ಶಿಷ್ಯಬಳಗವನ್ನು ಹೊಂದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ ಎಲ್ಲರ ಮನ ಗೆದ್ದಿರುವ ಅವರು ಮುಂದಿನ ದಿನಗಳಲ್ಲಿ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ಅನುಭವವನ್ನು ಸಹಕಾರಿ ಕ್ಷೇತ್ರಕ್ಕೂ ವಿಸ್ತರಿಸುವ ಹಂಬಲ ಹೊಂದಿದ್ದು, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ವ್ಯಾಪ್ತಿಯ ಮತದಾರರು “ನನ್ನ ಕ್ರಮ ಸಂಖ್ಯೆ 8 ಹಾಗೂ ಗಾಳಿಪಟ ಚಿಹ್ನೆ” ಗೆ ಮತ ನೀಡುವ ಮೂಲಕ ಆರಿಸಿ ಕಳಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.