Join The Telegram | Join The WhatsApp |
(ನಾನು ಕಂಡಂತೆ ಬ್ರಹ್ಮ ಕುಮಾರೀಸ್)
ನೇರ ವರದಿ ಬರಹ
ಮೌಂಟ್ ಅಬು ವಿನ ಶಿಖರ ಕಣಿಗಳು ಪ್ರಜಾಪಿತ ಬ್ರಹ್ಮ ಕುಮಾರೀಸ್ ಮುಖ್ಯ ಕೇಂದ್ರ ಶಾಂತಿವನದಿಂದ……
ಬರಹ: ಲೇಖನ: ಎಸ್ ಸತೀಶ್ ಕುಮಾರ್ ಕೋಟೇಶ್ವರ ಸಂಪಾದಕರು ಅಧ್ಯಾತ ರಹಸ್ಯ ಮಾಸಪತ್ರಿಕೆ ಕೋಟೇಶ್ವರ……
20/02/2023… ಐದನೇ ದಿನ
ಮೌಂಟ್ ಅಬು ವಿನ ಶಿಖರ ಕಣಿ ಗಳಲ್ಲಿ ಸರಿಯಾದ ಅಧ್ಯಾತ್ಮ ದ ಕಣ್ಣನ್ನು ತೆರೆದು ನೋಡಿದರೆ ಇದು ಕಲಿಯುಗದ ಅಂತಿಮ ಹಂತದಲ್ಲಿ ಜಗತ್ತು ಸಾಗುತ್ತಿದೆ ಅಂತ ಎಂತಹ ಸಾಧಕರಿಗೂ ಅನ್ನಿಸದೆ ಇರದು! ಭಾರತದಂತಹ ಪುಣ್ಯ ಭೂಮಿಯಲ್ಲಿ ನಾವುಗಳು ಜನುಮ ಪಡೆ ದದ್ದೇ ವಿಶೇಷ! ಕಲಿಯುಗದ ಅಂತಿಮ ಹಂತ ಮುಗಿದು ಸಂಗಮ ಯುಗದ ಅತೀ ಸಣ್ಣ ಯುಗವನ್ನು ದಾಟುತ್ತಿದ್ದೇವೆ.ಸತ್ಯ ಯುಗದಲ್ಲಿ ಸತ್ಯತೆ.ತೇತ್ರಾ ಯುಗದಲ್ಲಿ ಕಲಿತ ಕಲೆ ಕಡಿಮೆ ಆಗುತ್ತಾ.. ದೇವತೆಗಳಾಗಿದ್ದವರು ಸಾಮಾನ್ಯ ಮಾನವರು ಆಗುತ್ತಾ ಅಧಿಕಾರ, ಪಾಳೆಗಾರಿಕೆ,ಗುಂಪು ಗಾರಿಕೆ,ಹಿಂಸೆ,ಅವ್ಯ ಭಿ ಚಾರತೆ,ಪಂಚ ತತ್ವದ ವಿರುದ್ಧ ಪಂಚ ವಿಕಾರಗಳು ಹೀಗೆ ನಡೆಯುತ್ತಾ ಮೊಟ್ಟ ಮೊದಲನೆಯದಾಗಿ ಶ್ರೀ ಕೃಷ್ಣ ಜನನ, ಶ್ರೀ ರಾಧೆ ಯೊಂದಿಗೆ ವಿವಾಹ ಇದರೊಂದಿಗೆ ಶ್ರೀ ಲಕ್ಷ್ಮೀ ನಾರಾಯಣ ರಾಗಿ ಪರಿವರ್ತನೆ.ಇವರ ಕಾಲದಲ್ಲಿ ಸಂಪೂರ್ಣ ಸತ್ಯ ಯುಗ ಮುಕ್ತಾಯ.
ತೇತ್ರಾಯುಗದಲ್ಲಿ ಶ್ರೀ ರಾಮ ಮತ್ತು ಶ್ರೀ ಸೀತಾ ಮಾತೆಯರ ಕಾಲ! ಬದುಕಿನ ವ್ಯವಸ್ಥೆ ಇಡೀ 5000 ವರ್ಷಗಳ ಪ್ರಾಮಾಣಿಕ ಸೃಷ್ಟಿ ಚಕ್ರದಲ್ಲಿ 2500 ವರ್ಷಗಳು ಮುಗಿಯುತ್ತದೆ.
ಇಲ್ಲಿಗೆ ಸೃಷ್ಟಿ ಚಕ್ರದ ಕಾಲಗಳು ವಾಮ ಮಾರ್ಗದಲ್ಲಿ ಸಾಗುತ್ತದೆ.
ಸೃಷ್ಟಿ ಚಕ್ರದ ದ್ವಾಪರಯುಗ ಪ್ರಾರಂಭ…!
ರಾಜರ ಆಡಳಿತ ಪ್ರಾರಂಭ.ಇಲ್ಲಿಯೂ ಕೂಡ ಯಾವುದೇ ಸುಖದ ಸಂಪತ್ತು ವೈಭೋಗ ಗಳಿ ಲ್ಲದೆ ಕಾಲನ ಗೆರೆಗಳು ದಾಟುತ್ತದೆ.ನಂತರ ಕಲಿಯುಗದ ಪ್ರಾರಂಭ ಬರೀ ರಾಕ್ಷಸೀ ವ್ಯವಸ್ಥೆ!
ನಾವೇ ದೇವತೆಗಳಾಗಿದ್ದವರು ಸಾಮಾನ್ಯ ಜನರಂತೆ ಬದುಕು ಸಾಗಿಸುತ್ತಿರುವ ಎಲ್ಲರಿಗೂ ಕಲಿಯುಗ ಮುಗಿದು ಸಂಗಮ ಯುಗದ ಕೊನೆಯಲ್ಲಿ ಬಂದು ನಿಂತಿದ್ದೇವೆ………
ಯುಗದ ಕೊನೆಯಲ್ಲಿ ಸ್ವಯಂ ಶಿವನ ಅವ ತರಣೆ ಆಗುತ್ತದೆ.ಅದನ್ನೇ ಪ್ರಜಾಪಿತ ಬ್ರಹ್ಮ ಕುಮಾರೀಸ್ ಎಂಬಾ ಈಶ್ವರೀಯ ವಿದ್ಯಾಲಯ ಸ್ಥಾಪನೆ!
ಹೀಗೆ ನಾಲ್ಕು ಯುಗದ ಕೊನೆಯಲ್ಲಿ ಆಗುವ ಪರಿಣಾಮ ಭಾರತದಲ್ಲಿ ಹೊಸ ಹೊಸ ಬದಲಾವಣೆ ಆಗುತ್ತದೆ.
ಅದರಂತೆ ಇಡೀ ಜಗತ್ತು ಯುಗದ ಮಹಿಮೆ ಅನಸಾರ ಜಗತ್ತು ನಿಂತಿದೆ.
ಎನ್ನುವುದನ್ನು ಸಾರೀ ಸಾರಿ ಹೇಳುತ್ತಿದೆ.
ಮೌಂಟ್ ಅಬು ಶಿಖರ!ದಲ್ಲಿ ಕಣಿ!ಯಲ್ಲಿ ಸಂಸ್ಥೆಯ ಮುದ್ರಿತ ಕಳೆದು ಹೋದ ನೆನಪಿನೊಂದಿಗೆ ಸುತ್ತ ಮುತ್ತಲಿನ ಪರಿಸರದಲ್ಲಿ ಅರಸುವ ನೆನಪಿನೊಂದಿಗೆ ನಿನ್ನೆಯ ದಿನ ಗಲ್ಲಿ ಗಲ್ಲಿ ಸುತ್ತಿದೆನು!
ಕಳೆದು ಹೋದ ನೆನಪು ಮರುಕಳಿಸಿತು.ಯೋಗ! ಧ್ಯಾನ!ಗಳು ಮತ್ತೊಂದಿಷ್ಟು ಹೊಸ ಅನುಭವ ಕ್ಕೆ ಕೊಂಡು ಹೋಗಿ ಗಟ್ಟಿಯಾಗಿ ಅಪ್ಪಿಕೊಂಡು ನನ್ನ ನ್ನು ಮುನ್ನೆಡೆಸುತ್ತಿರುವ ಅನುಭವ!ಯುಗ ಯುಗ ಗಳೇ ಕಳೆದು ಹೋದರೂ ಸ್ವಯಂ ಭಗವಂತ ಭೂಮಿಗೆ ಬಂದು ನಮ್ಮನ್ನೆಲ್ಲ ಪೊರೆಯುತ್ತಿರುವ ಅನುಭವ…..
ಬದುಕು ಇಷ್ಟೇ! ಆಗುವುದೆಲ್ಲಾ ಒಳ್ಳೆಯದಕ್ಕೆ,….ಆಗುತ್ತಿರುವುದೆಲ್ಲ ಒಳ್ಳೆಯದಕ್ಕೆ!ರೋಧಿಸಲು ನೀನು ಕಳೆದು ಕೊಂಡಿರುವುದಾದರೂ ಏನು? ಇಂದು ನಿನ್ನದು ಮುಂದೆ ಇನ್ಯಾರದ್ದೋ!
ಪರಿವರ್ತನೆ ಜಗದ ನಿಯಮ
ಎಸ್ ಸತೀಶ್ ಕುಮಾರ್ ಕೋಟೇಶ್ವರ ಸಂಪಾದಕರು ಅಧ್ಯಾತ್ಮ ರಹಸ್ಯ *ಮಾಸಪತ್ರಿಕೆ ಕೋಟೇಶ್ವರ
ಅಧ್ಯಕ್ಷರು ಕುಂದಾಪುರ ತಾಲೂಕು ಪತ್ರಕರ್ತರ ಸಂಘ ರಿ. ಕುಂದಾಪುರ
9964183229/9620472014
Join The Telegram | Join The WhatsApp |