Join The Telegram | Join The WhatsApp |
ಅಥಣಿ-
ಅರೆ ಅರೇ ಅರೇ ಏನ ಏನಪ್ಪಾ ? ಮಕ್ಕಳು ಮೈದಾನದಲ್ಲಿ ಎಷ್ಟೊಂದು ಚೆನ್ನಾಗಿ ವ್ಯಾಪಾರ ಮಾಡುತ್ತಿದ್ದಾರೆ.ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಮಕ್ಕಳು ಮಾಡುವ ವ್ಯಾಪರ ಸೀಟಿಯ ವ್ಯಾಪಾರಕ್ಕೇನು ಕಮ್ಮಿ ಇಲ್ಲಾ ಎಂಬುದನ್ನು ತೋರಿಸಿದ್ದಾರೆ ಜೀವನದ ಚಕ್ರಕ್ಕೆ ಸರ್ಕಾರಿ ನೌಕರಿನೆ ಬೇಕು ಅಂತೇನಿಲ್ಲ ಸ್ವಂತ ದುಡಿಮೆಯಿಂದಲೂ ಯಶಸ್ಸು ಕಾಣಬಹುದು ಅನ್ನೋದನ್ನ ಈ ಮಕ್ಕಳಿಂದ ಕಲಿಯಬೇಕು.
ಅಷ್ಟಕ್ಕೂ ಈ ಶಾಲೆ ಯಾವುದು ಅಂತೀರಾ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಹಲ್ಯಾಳ ಗ್ರಾಮದಲ್ಲಿರುವ ಶಾಲೆ ಬಸವೇಶ್ವರ ಶಿಕ್ಷಣ ಸಂಸ್ಥೆ. ಮಕ್ಕಳ ಶಾಲಾ ಕಲಿಕೆಯ ಜೊತೆ ಜೊತೆಗೆ ವ್ಯವಹಾರದ ಜ್ಞಾನದ ರೂಢಿಗಾಗಿ ಯೋಜನೆ ಮಾಡಿದ್ದು, ಹೀಗೆ ಮಾಡುವುದರಿಂದ ಭವಿಷ್ಯತ್ತಿನಲ್ಲಿ ಉಪಯುಕ್ತಕಾರಿ ಆಗುತ್ತೆ ಅನ್ನೋ ಕಾರಣಕ್ಕೆ.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ್ ತಳವಾರ್, ಶಿಕ್ಷಣ ಸಂಯೋಜಕರು ಎಸ್ ಪಿ ಸನದಿ, ಕ್ಷೇತ್ರ ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ ವಿನಾಯಕ ಸನದಿ ಇವರ ಮಾರ್ಗದರ್ಶನದಲ್ಲಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಆರ್ ಎಂ ಪಾಟೀಲ್ ಹಾಗೂ ಮುಖ್ಯೋಪಾಧ್ಯಾಯರಾದ ಮಹಾಂತೇಶ ಹಿರೇಮಠ ಇವರ ನೇತೃತ್ವದಲ್ಲಿ ಎಲ್ಲಾ ಶಾಲಾ ಸಿಬ್ಬಂದಿಯ ಅವರ ಸಹಾನುಭೂತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಲೆಯ ಸಂಸ್ಥಾಪಕರಾದ ಆರ್ ಎಂ ಪಾಟೀಲ್ ಅವರು ಮಾತನಾಡಿದರು.
ವರದಿ- ಆನಂದ ಬಿರಾದರ
Join The Telegram | Join The WhatsApp |