Join The Telegram | Join The WhatsApp |
ಬೆಳಗಾವಿ :
ಬೆಳಗಾವಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಪ್ರೇರಣಾ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ದಿನಾಂಕ 21 ನವೆಂಬರ 2022 ರಂದು , ಪ್ರೌಢಶಾಲೆಯ ವಿಜ್ಞಾನ ಉಪನ್ಯಾಸಕರಿಗೆ ಒಂದು ದಿನದ ” ವಿಜ್ಞಾನ – ವಿಷಯದ ಕಾರ್ಯಾಗಾರ “ಪ್ರೇರಣಾ ಮಹಾವಿದ್ಯಾಲಯದಲ್ಲಿ ನಡೆಯಿತು. ಬೆಳಗಾವಿ ನಗರದ ವಿವಿಧ ಫ್ರೌಡಶಾಲೆಗಳಿಂದ ಸುಮಾರು 60 ಉಪನ್ಯಾಸಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆ ಬರೆಯುವ ವಿದ್ದ್ಯಾರ್ಥಿಗಳಿಗೆ ತರಬೇತಿ ನೀಡಲು ಈ ಕಾರ್ಯಾಗಾರವನ್ನು ವಿಙ್ನಾನ ಶಿಕ್ಷಕರಿಗೆ ಆಯೋಜಿಸಲಾಗಿತ್ತು.
ನಗರ ವಲಯ ಸಮನ್ವಯ ಅಧಿಕಾರಿ ಐ.ಡಿ ಹೀರೆಮಠ ಮಾತನಾಡಿ, ‘ ಹೊಸ ಪಠ್ಯಕ್ಕೆ ಅನುಗುಣವಾಗಿ ಹತ್ತನೇಯ ಪ್ರಶ್ನೆಪತ್ರಿಕೆಯಲ್ಲಿ ಅನ್ವಯಿಕ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳುವರು. ಹೀಗಾಗಿ ಉಪನ್ಯಾಸಕರು ಪ್ರಾಯೋಗಿಕ ವಿಷಯಗಳಲ್ಲಿ ನಿಗಾ ವಹಿಸಬೇಕೆಂದು ಹಾಗೂ ಜಿಲ್ಲೆಯ ಹತ್ತನೇಯ ತರಗತಿಯ ಫಲಿತಾಂಶ ಸುಧಾರಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಕರೆ ನೀಡಿದರು.
ಸಿ.ವಿ ರಾಮನ್ ವೇದಿಕೆ ಅಧ್ಯಕ್ಷರು, ಹಾಗೂ ಕೆ.ಎಲ್.ಎಸ್. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಂದಿನಿ ಮತ್ತು ಸ್ವಾಧ್ಯಾಯ ಫ್ರೌಡಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕುಲಕರ್ಣಿ ಅವರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೇರಣಾ ಮಹಾವಿದ್ಯಾಲಯದ ಉಪನ್ಯಾಸಕರಾದ ವೇಣುಗೋಪಾಲ ( ರಸಾಯನ ಶಾಸ್ತವಿಭಾಗ ) ವೈಭವ ಬಾಡಕರ ( ಜೀವ ಶಾಸ್ತ್ರ ವಿಭಾಗ ) ಮತ್ತು ಕಿರಣ ಬಗನಾಳಿ ( ಭೌತ ಶಾಸ್ತ್ರವಿಭಾಗ ) ಭಾಗವಹಿಸಿದ್ದರು.
Join The Telegram | Join The WhatsApp |