
ಹೆಬ್ರಿ : ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ 2024-25 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇಕಡಾ 100, ವಿಜ್ಞಾನ ವಿಭಾಗದಲ್ಲಿ ಶೇಕಡಾ 98.31 ಸಾಧನೆ ಮಾಡಿರುತ್ತದೆ.
ಹಾಜರಾದ 248 ವಿದ್ಯಾರ್ಥಿಗಳಲ್ಲಿ 122 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 117 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಿಜ್ಞಾನ ವಿಭಾಗದ ಅನನ್ಯ ಕಾಮತ್ 592 (ರಾಜ್ಯಮಟ್ಟದ 8ನೇ ರ‍್ಯಾಂಕ್), ಶ್ರೀರಮ್ಯ ಪೈ 590 (ರಾಜ್ಯಮಟ್ಟದ 10 ನೇ ರ‍್ಯಾಂಕ್), ಸಂದೇಶ್ ನಾಯ್ಕ 587, ಮೈತ್ರಿ ಎಸ್. ಭಟ್ 585, ಪವನ್ ಕಲ್ಕೂರ್ 585, ಆತ್ಮೀಕ ಎಚ್ ಶೆಟ್ಟಿ 584, ಪದ್ಮಶ್ರೀ ಎಸ್ 583, ಸನತ್ ಎಸ್ ಶೆಟ್ಟಿ 583, ಪ್ರಮತ್ ನಾಡಿಗ್ 581, ಅಭಿರಾಮ್ ಕಶ್ಯಪ್ 581, ಆಶ್ಲೇಷ್ ಶೆಟ್ಟಿ 580.
ವಾಣಿಜ್ಯ ವಿಭಾಗದಲ್ಲಿ ಪ್ರವೀಣ್ ಶೆಣೈ 586, ಜಾಹ್ನವಿ ಪ್ರಭು 582, ತ್ರಿಶಾ 582, ಶ್ರೇಷ್ಠ ಶೆಟ್ಟಿ 581 ಅಂಕಗಳನ್ನು ಗಳಿಸಿರುತ್ತಾರೆ.