Join The Telegram | Join The WhatsApp |
ಯುಎಇ:
ಯುಎಇಗೆ ಮತ್ತು ಅಲ್ಲಿಂದ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಪಾಸ್ಪೋರ್ಟ್’ನಲ್ಲಿ ತಮ್ಮ ಪ್ರಾಥಮಿಕ ಮತ್ತು ದ್ವಿತೀಯ ಹೆಸರು ಕಡ್ಡಾಯವಾಗಿ ಹೊಂದಿರಬೇಕು ಎಂದು ಏರ್ ಇಂಡಿಯಾ ಎಕ್ಸ್’ಪ್ರೆಸ್ ಘೋಷಿಸಿದೆ. ಯುಎಇ ಯಲ್ಲಿನ ಟ್ರಾವೆಲ್ ಏಜೆಂಟ್’ಗಳಿಗೆ ನೀಡಿದ ಸೂಚನೆಯಲ್ಲಿ ಇದನ್ನು ತಿಳಿಸಲಾಗಿದೆ.
ಹೊಸ ಮಾರ್ಗಸೂಚಿಯ ಅನ್ವಯ, ಉಪನಾಮ ಇಲ್ಲದ ಅಥವಾ ಒಂದೇ ಹೆಸರು (ಪದ) ಹೊಂದಿರುವ ಯಾವುದೇ ಪಾಸ್ಪೋರ್ಟ್ ಹೊಂದಿರುವವರನ್ನು ಯುಎಇ ವಲಸೆ ಅಧಿಕಾರಿಗಳು ಸ್ವೀಕರಿಸುವುದಿಲ್ಲ ಮತ್ತು ಪ್ರಯಾಣಿಕರಿಗೆ ಪ್ರಯಾಣಿಸಲು ಅನುಮತಿಸಲಾಗುವುದಿಲ್ಲ ಎಂದು ತಿಳಿದುಬಂದಿದೆ. ಈ ನಿಯಮ ನವೆಂಬರ್ 21ರಿಂದ ಜಾರಿಗೆ ಬರಲಿದೆ.
ಪ್ರವಾಸಿ ಅಥವಾ ವಿಸಿಟ್ ವೀಸಾದಲ್ಲಿ ಪ್ರಯಾಣಿಸುವವರಿಗೆ ಈ ನಿಯಮ ಅನ್ವಯಿಸುತ್ತಿದ್ದು, ಉದ್ಯೋಗ ಅಥವಾ ವ್ಯವಹಾರಿಕ ವೀಸಾ ಹೊಂದಿರುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
Join The Telegram | Join The WhatsApp |