ಹೆಬ್ರಿ : ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಡೆಸುವ ವಿಜ್ಞಾನ ಮಾದರಿ ತಯಾರಿಯ ರಾಷ್ಟ್ರ ಮಟ್ಟದ ಇನ್ ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಅಮೃತ ಭಾರತಿ ವಿದ್ಯಾಲಯದ ಪ್ರೌಢಶಾಲೆಯ ಪ್ರಣಾಮ್.ಜಿ. ಪೂಜಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಈ ಬಾರಿ ಉಡುಪಿ ಜಿಲ್ಲಾ ಮಟ್ಟಕ್ಕೆ 133, ರಾಜ್ಯ ಮಟ್ಟಕ್ಕೆ 13 ವಿದ್ಯಾರ್ಥಿಗಳ ಮಾದರಿ ಆಯ್ಕೆಯಾಗಿದ್ದು , ಅದರಲ್ಲಿ ಹೆಬ್ರಿ ತಾಲೂಕಿನ ಅಮೃತ ಭಾರತಿ ವಿದ್ಯಾಲಯದ ಪ್ರಣಾಮ್ ನ
” ಮಲ್ಟಿ ಪರ್ಪಸ್ ರೋವರ್ ” ಯಂತ್ರವನ್ನು ತಯಾರಿಸುವ ಮೂಲಕ ಗಮನ ಸೆಳೆದಿದ್ದಾನೆ.
ಈ ಮಾದರಿಯ ತಯಾರಿಕೆಗೆ ಸಹಾಯಕನಾಗಿ ಪವನ್ ಹೆಬ್ಬಾರ್ ಸಹಕರಿಸಿದ್ದಾನೆ. ಇವರಿಗೆ ವಿಜ್ಞಾನ ಶಿಕ್ಷಕರು ಮಾದರಿ ತಯಾರಿಯಲ್ಲಿ ತರಬೇತಿ ನೀಡಿದ್ದಾರೆ.
ಇವರನ್ನು ಸಂಸ್ಥೆಯ ಆಡಳಿತ ಮಂಡಳಿ ಮತ್ತು ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್ ಅಭಿನಂದಿಸಿದ್ದಾರೆ.