ಬೆಳಗಾವಿ : ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಬೆಳಗಾವಿ ಏಕವಲಯ ಅಂತರ್ ಮಹಾವಿದ್ಯಾಲಯಗಳ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಹಾಗೂ ಆಯ್ಕೆ ಪ್ರಕ್ರಿಯು ದಿನಾಂಕ್ 16 ಮತ್ತು 17 ರಂದು ವಿಜಯಪುರ ಬಿ ಎಲ್ ಡಿ ಸಂಸ್ಥೆಯ ಸಿ ಪಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿತು.
ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯ ಪುರುಷ ಹಾಗೂ ಮಹಿಳಾ ತಂಡಗಳು ಭಾಗವಹಿಸಿ ಎರಡು ತಂಡಗಳು ರನ್ನರ್ ಆಪ್ ಸ್ಥಾನವನ್ನು ಪಡೆದುಕೊಂಡಿವೆ. ಪುರುಷರ ವಿಭಾಗದಲ್ಲಿ ಎರಡು ವಿದ್ಯಾರ್ಥಿಗಳು ಹಾಗು ಮಹಿಳೆಯರ ವಿಭಾಗದಲ್ಲಿ ಮೂರು ಕ್ರೀಡಾಪಟುಗಳು ಅಂತರ್ ವಿಶ್ವ ವಿದ್ಯಾಲಯದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮತ್ತು ಆಡಳಿತ ಮಂಡಳಿ ಸರ್ವ ಸದಸ್ಯರು, ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೆ.ಎಸ್. ಕವಳೇಕರ ಹಾಗೂ ಸಿಬ್ಬಂದಿ ವರ್ಗದವರು ಕಾಲೇಜಿನ ದೈಹಿಕ ನಿರ್ದೇಶಕ ಡಾ. ಶಿವಾನಂದ ಬುಲಬುಲಿ ಅಭಿನಂದಿಸಿದ್ದಾರೆ.