Join The Telegram | Join The WhatsApp |
ಬೆಂಗಳೂರು:
2022-23 ನೇ ಸಾಲಿನ ಎರಡು ವರ್ಷದ ಬಿ.ಇಡಿ ಕೋರ್ಸ್ ನ ದಾಖಲಾತಿಗೆ ( B.Ed Course Admission 2023 ) ಸಂಬಂಧಿಸಿದಂತೆ ಸರ್ಕಾರಿ ಕೋಟಾದ ಸೀಟುಗಳ ಆಯ್ಕೆ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
2022-23 ನೇ ಸಾಲಿನ ಬಿಇಡಿ ಕೋರ್ಸ್ ಗೆ ದಾಖಲಾತಿ ಸಂಬಂಧ ಸರ್ಕಾರಿ ಕೋಟಾದ ಸೀಟುಗಳನ್ನು ಕೇಂದ್ರೀಕೃತ ದಾಖಲಾತಿ ಘಟಕದಿಂದ ಭರ್ತಿ ಮಾಡವು ಸಂಬಂಧ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿತ್ತು.
ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿದ ಬಳಿಕ, ನಿಯಮಾನುಸಾರ ಮೆರಿಟ್ ಮತ್ತು ಮೀಸಲಾತಿಯನ್ವಯ ಕಾಲೇಜು ಸಹಿತ ಸೀಟು ಹಂಚಿಕೆ ಆಯ್ಕೆ ಪಟ್ಟಿ, ಅರ್ಹತಾಪಟ್ಟಿ, ತಿರಸ್ಕೃತ ಪಟ್ಟಿಯನ್ನು ಇಲಾಖೆಯ ಜಾಲತಾಣ http://schooleducation.kar.nic.inನಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದೆ.
Join The Telegram | Join The WhatsApp |