ಮಲಪ್ಪುರಂ: ಕೇರಳದ ತಿರೂರ್ ಬಳಿಯ ಮಸೀದಿಯಲ್ಲಿ ಏರ್ಪಡಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಚ್ಚಿದ ಆನೆ ಯರ್ರಾಬಿರ್ರಿ ಓಡಿದ ಪರಿಣಾಮ 23 ಜನರಿಗೆ ಗಾಯಗಳಾಗಿವೆ.
ಮಂಗಳವಾರ ಮಧ್ಯರಾತ್ರಿ ಘಟನೆ ನಡೆದಿದೆ. ಬೆಚ್ಚಿಬಿದ್ದ ಆನೆ ವ್ಯಕ್ತಿ ಒಬ್ಬರನ್ನು ಸೊಂಡಿಲಿನಿಂದ ತಿರುವಿ ಎಸೆದ ಪರಿಣಾಮ ಆ ವ್ಯಕ್ತಿ ಎಸೆಯಲ್ಪಪಟ್ಟಿದ್ದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆನೆಯ ವರ್ತನೆ ಕಂಡು ಬೆದರಿದ ಜನ ಓಡಿದ ಪರಿಣಾಮ ಸಂಭವಿಸಿದ ಕಾಲ್ತುಳಿತದಲ್ಲಿ 22 ಜನ ಗಾಯಗೊಂಡಿದ್ದಾರೆ. ಧಾರ್ಮಿಕ ಕಾರ್ಯಕ್ರಮಕ್ಕೆ 5 ಆನೆಗಳನ್ನು ಅಲಂಕರಿಸಲಾಗಿತ್ತು, ಇದರಲ್ಲಿ ಒಂದು ಆನೆ ಸಿಟ್ಟಿನಿಂದ ಎದುರಿದ್ದ ಜನರ ಮೇಲೆ ಎರಗಿ ವ್ಯಕ್ತಿಯನ್ನು ಸೊಂಡಿಲಿನಿಂದ ತಿರುವಿ ಎಸೆದಿದ್ದು ಇದರ ವಿಡಿಯೋ ವೈರಲ್ ಆಗಿದೆ.