ಬೆಳಗಾವಿ : ನಿಪ್ಪಾಣಿಯ ಬಾದಲ್ ಪ್ಲಾಟ್ ನಲ್ಲಿ 10 ವರ್ಷದ ಬಾಲಕಿಗೆ 10 ರೂಪಾಯಿ ನೀಡಿ ಅಮಿಷವೊಡ್ಡಿ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಸೀಫ್ ಬಾಗವಾನ್ ಈ ನೀಚ ಕೃತ್ಯ ಎಸಗಿದವ. ಬಾಲಕಿ ಆಗಾಗ ತನ್ನ ಅಂಗಾಂಗವನ್ನು ಮುಟ್ಟಿ ಗಮನಿಸುತ್ತಿದ್ದಾಗ ಪಾಲಕರು ಗಮನಿಸಿದ್ದಾರೆ. ಆಗ ಬಾಲಕಿ ವಿಷಯ ತಿಳಿಸಿದ್ದಾಳೆ. ನಂತರ ಪಾಲಕರು ಆತನನ್ನು ಆಗಸ್ಟ್ 18ರ ರವಿವಾರ ಥಳಿಸಿದ್ದಾರೆ. ಬುಧವಾರ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.