
ಟ್ರಸ್ಟ್ ಮೂಲಕ ಅನಾರೋಗ್ಯ ಹಾಗೂ ವಿವಿಧ ಸಮಸ್ಯೆಗಳಿಂದ ತೊಂದರೆ ಅನುಭವಿಸುತಿರುವ ಅಶಕ್ತ ಕುಟುಂಬದವರಿಗೆ ನೆರವು ನೀಡುವ ಕಾರ್ಯ ಶ್ರೇಷ್ಠ, ಇಂತಹ ಮಾನವೀಯತೆಯ ಸೇವಾ ಕಾರ್ಯದಿಂದ ಸಂತೃಪ್ತಿಯನ್ನು ಪಡೆಯಬಹುದಾಗಿದೆ. ಅರಸಮ್ಮಕಾನು ನೆರಳು ಚಾರಿಟೇಬಲ್ ಟ್ರಸ್ಟ್ ನೆರವಿನ ನೆರಳು ಕಾರ್ಯಕ್ರಮವು ಆಶಕ್ತ ಕುಟುಂಬಗಳಿಗೆ ನೆರವು ನೀಡಿ ಸಮಾಜದಲ್ಲಿ ಉನ್ನತ ಸ್ಥಾನಮಾನಗಳೊಂದಿಗೆ ಗುರುತಿಸಿಕೊಳ್ಳುವಂತಾಗಲಿ-ಬಿ.ಸತೀಶ್ ಕಿಣಿ ಬೆಳ್ವೆ.ಅಧ್ಯಕ್ಷರು, ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್,ರಿ,ಬೆಳ್ವೆ
ಅರಸಮ್ಮಕಾನು : ಹಿರಿಯರು ಮಾನವೀಯತೆಯ ಸದ್ಗುಣಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಲು ನೀಡಿದ ಬಹು ದೊಡ್ಡ ಕೊಡುಗೆಗೆ ಸಮಾಜದಲ್ಲಿ ಶ್ರೇಷ್ಠ ಸ್ಥಾನಮಾನ,ಗೌರವ ಹಾಗೂ ಮೌಲ್ಯವನ್ನು ಹೊಂದಿದೆ. ಅರಸಮ್ಮಕಾನು ನೆರಳು ಚಾರಿಟೇಬಲ್ ಟ್ರಸ್ಟ್ ನೆರವಿನ ನೆರಳು ಕಾರ್ಯಕ್ರಮವು ಆಶಕ್ತ ಜನರ ಪಾಲಿಗೆ ಬೆಳಕು ನೀಡುವ ಮೂಲಕ
ಅತ್ಯುನ್ನತ ಸ್ಥಾನಮಾನವನ್ನು ಗಳಿಸಲಿ ಎಂದು ನಿವೃತ್ತ ನ್ಯಾಯಾಧೀಶ, ನಿವೃತ್ತ ಲೋಕಾಯುಕ್ತ ಎನ್. ಸಂತೋಷ
ಹೆಗ್ಡೆ ಹೇಳಿದರು.ಅರಸಮ್ಮಕಾನು ನೆರಳು ಚಾರಿಟೇಬಲ್ ಟ್ರಸ್ಟ್ ಇದರ ನೆರವಿನ ನೆರಳು
ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ನೆರವಿನ ನೆರಳು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು.
ಅರಸಮ್ಮಕಾನು ನೆರಳು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ರಾಧಾಕೃಷ್ಣ ಕ್ರಮಧಾರಿ ಅಧ್ಯಕ್ಷತೆ ವಹಿಸಿದ್ದರು.
ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್,ರಿ, ಅಧ್ಯಕ್ಷ ಬಿ.ಸತೀಶ್ ಕಿಣಿ ಬೆಳ್ವೆ,ಕುಂದಾಪುರ
ಲೋಕೋಪಯೋಗಿ ಇಲಾಖೆ ಅಭಿಯಂತರ ಮಹಾಬಲ ನಾಯ್ಕ ಅಲ್ಬಾಡಿ,ಕರ್ಣಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ
ಸೆಟ್ಟೋಳಿ,ಅರಸಮ್ಮಕಾನು ಶ್ರೀ ನಾಗಕನ್ನಿಕಾ
ದುರ್ಗಾಪರಮೇಶ್ವರೀ ದೇವಳದ ಅರ್ಚಕ ನಾಗರಾಜ ಬಾಯರಿ ಗಂಗಡಬೈಲು, ಡಾ.ಅಭಿಷೇಕ್ ಬಾಯರಿ
ಗಂಗಡಬೈಲು,ದೇವಳದ ವ್ಯವಸ್ಥಾಪನಾವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
ಬಿ.ಚಂದ್ರಶೇಖರ ಶೆಟ್ಟಿ ಮೂಡುಬೈಲು, ಪತ್ರಕರ್ತ ಜಾನ್.ಡಿಸೋಜಾ,
ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ಉದಯಕುಮಾರ್ ಶೆಟ್ಟಿ ಶೇಡಿಮನೆ, ನೆರಳು ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಪ್ರವೀಣ ಹಾಗೂ ಟ್ರಸ್ಟ್ ಪದಾಧಿಕಾರಿಗಳು
ಉಪಸ್ಥಿತರಿದ್ದರು.ಆರ್ಥಿಕ ಸಂಕಷ್ಟದಲ್ಲಿರುವ ೨೫ ಅಶಕ್ತ ಕುಟುಂಬಗಳಿಗೆ ನೆರವಿನ ನೆರಳು ಚೆಕ್ ವಿತರಿಸಲಾಯಿತು.ದಿನೇಶ್ ಶೆಟ್ಟಿ ಬೆಪ್ಡೆ,ಗಣಪತಿ ಶೆಟ್ಟಿ ಬೆಪ್ಡೆ ಹಾಗೂ ಬಳಗದವರಿಂದ ಯಕ್ಷ-
ಗಾನ ವೈಭವ,ಪುತ್ತೂರು ಜಗದೀಶ್ ಆಚಾರ್ಯ ಮತ್ತು ತಂಡದವರಿಂದ ಸಂಧ್ಯಾರಾಗ ಸಂಗೀತ ಗಾನ ಸಂಭ್ರಮ
ಕಾರ್ಯಕ್ರಮ ನಡೆಯಿತು.ಶಿಕ್ಷಕ ರಾಜೀವ ಪೂಜಾರಿ ಸ್ವಾಗತಿಸಿದರು.ಕೆ.ರಾಧಾಕೃಷ್ಣ
ಕ್ರಮಧಾರಿ ಪ್ರಾಸ್ತಾವಿಕ ಮಾತನಾಡಿದರು. ಚೆನ್ನಾ ಪೂಜಾರಿ ಸನ್ಮಾನ ಪತ್ರ ವಾಚಿಸಿದರು.ಶಿಕ್ಷಕ ಪ್ರಕಾಶ ಪೂಜಾರಿ ನಿರೂಪಿಸಿದರು.ಶಿಕ್ಷಕ ಮಂಜುನಾಥ ಆಚಾರ್ಯ ವಂದಿಸಿದರು.