ಬೆಳಗಾವಿ: ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಬುಧವಾರ ನಗರದ ಕುಮಾರಸ್ವಾಮಿ ಬಡಾವಣೆಯ ಹತ್ತಿರ ರಸ್ತೆ ನಿರ್ಮಾಣ, ದುರಸ್ತಿಗೆ ಬಳಸಬಹುದಾದ ಎಕೋಫಿಕ್ಸ್ ಡಾಂಬರೀಕರಣ ಉತ್ಪನ್ನ ಬಳಕೆಯ ಅಣಕು ವೀಕ್ಷಿಸಿದರು.

ಎಕೋಫಿಕ್ಸ್ ಡಾಂಬರೀಕರಣ ಉತ್ಪನ್ನದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಮಳೆ, ಚಳಿ, ಬೇಸಿಗೆಯಲ್ಲೂ ಈ ಉತ್ಪನ್ನವನ್ನು ಬಳಕೆ ಮಾಡಬಹುದು. ರಸ್ತೆ ಗುಂಡಿಗಳ ತ್ವರಿತ ದುರಸ್ತಿಗಾಗಿ ಇದು ಅತೀ ಉಪಯುಕ್ತ. ಹೆದ್ದಾರಿ, ಸೇತುವೆ, ಪ್ಯಾಚ್ ವರ್ಕ್, ತಗ್ಗು ಪ್ರದೇಶದ ದುರಸ್ತಿ, ವಾಹನ ನಿಲುಗಡೆ ಸ್ಥಳ ನಿರ್ಮಾಣ ಹಾಗೂ ಇನ್ನಿತರ ರಸ್ತೆ ದುರಸ್ತಿ ಕಾಮಗಾರಿಗಳಿಗೆ ಎಕೋಫಿಕ್ಸ್ ಪ್ರೊಡಕ್ಟ್ ಬಳಸುವುದು ಸೂಕ್ತವಾಗಿದೆ’ ಎಂದು ಎಕೋಫಿಕ್ಸ್ ಪ್ರತಿನಿಧಿಗಳು ವಿವರಿಸಿದರು.