ಬೆಳಗಾವಿ :
ಗಮಕ ಕಲೆ ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಂತಾ ಹೆಗಡೆಯವರು ಹೇಳಿದರು.

ಕರ್ನಾಟಕ ಗಮಕಕಲಾ ಪರಿಷತ್ತು, (ರಿ )ಬೆಂಗಳೂರು. ಬೆಳಗಾವಿ ಜಿಲ್ಲಾ ಘಟಕದವರು ನಮೋ ಕುಮಾರವ್ಯಾಸ ಕಾರ್ಯಕ್ರಮವನ್ನು ದಿ. 28 ಭಾನುವಾರ ಸಂಜೆ 5 ಗಂಟೆಗೆ ಚೆನ್ನಮ್ಮ ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ಕುಮಾರವ್ಯಾಸ ಭಾರತದಿಂದ ಆಯ್ದ ವಿಶ್ವರೂಪ ದರ್ಶನ ಭಾಗದ ವಾಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದುಷಿ ಮಂಜುಳಾ ಮರಾಠೆ ಅವರು ಹಾಗೂ ವ್ಯಾಖ್ಯಾನವನ್ನು ಸಂತಮೀರಾ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾತಾ ದಪ್ತರದಾರ, ಕರ್ನಾಟಕ ಕಲಾಶ್ರೀ ಗಣೇಶ ಉಡುಪ ಗಮಕ ವಾಚನ ನಡೆಸಿಕೊಟ್ಟರು.
ರಾಧಿಕಾ ಮಿರ್ಜಿ ಕರ್ನಾಟಕ ಗಮಕಕಲಾ ಪರಿಷತ್ತು, (ರಿ )ಬೆಂಗಳೂರು. ಬೆಳಗಾವಿ ಜಿಲ್ಲಾ ಘಟಕದವರು ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳ ಪ್ರಶಂಸಿಸಿದರು. ಈ ಸಂದರ್ಭದಲ್ಲಿ ಶ್ರೀಹರ್ಷ ದಂಪತಿಗಳನ್ನು ಸತ್ಕರಿಸಿ ಗೌರವಿಸಲಾಯಿತು.

ಮಂಗಳಾ ಕಾನಿಟ್ಕರ್ ಸ್ವಾಗತಿಸಿದರು. ಪ್ರಸನ್ನ ಹಾಗೂ ಶುಭಾ ಕಡಗದಕೈ ಪರಿಚಯಿಸಿದರು. ರಾಜೇಶ್ವರಿ ಜಮ್ಮಿಹಾಳ ವಂದಿಸಿದರು.