ಬೆಳಗಾವಿ : ದಂಡು ಮಂಡಳಿ ಸೇರಿದ ನಾಗರಿಕ ಪ್ರದೇಶವನ್ನು ಗುರುತಿಸುವ ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಬಗ್ಗೆಯೂ ನಡೆದು ಸುದೀರ್ಘವಾದ ಚರ್ಚೆಯಲ್ಲಿ ಸಂಸದ ಜಗದೀಶ ಶೆಟ್ಟರ್ ಭಾಗವಹಿಸಿ, ರಕ್ಷಣಾ ಇಲಾಖೆ ಪ್ರಸ್ತಾಪಿಸಿದ ನಿಯಮಾವಳಿಯಂತೆ ದಂಡು ಮಂಡಳಿಗೆ ಸೇರಿದ ಎಲ್ಲ ನಾಗರಿಕ ಪ್ರದೇಶವನ್ನು ಬೆಳಗಾವಿ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲವಾಗುವಂತೆ ಗುರುತಿಸಿ, ಕೂಡಲೇ ರಾಜ್ಯ ಸರ್ಕಾರಕ್ಕೆ ವರದಿಯನ್ನು ಜಿಲ್ಲಾಧಿಕಾರಿಗಳು ಕಳುಹಿಸುವ ಬಗ್ಗೆ ಮುಂದಿನ ಕ್ರಮವನ್ನು ಜರುಗಿಸುವಂತೆ ತಿಳಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು, ಬೆಳಗಾವಿ ನಗರ (ಉತ್ತರ) ಶಾಸಕ ಆಸಿಫ್ (ರಾಜು) ಸೇಠ, ಜಿಲ್ಲಾಧಿಕಾರಿ ಮಹಮ್ಮದ್ ರೋಶನ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.