ಬೆಳಗಾವಿ : ಬೆಳಗಾವಿ ಸಂಸದರಾಗಿ ಜಗದೀಶ್ ಶೆಟ್ಟರ್ ಆಯ್ಕೆಯಾಗಿ ತಿಂಗಳು ಕಳೆದಿದೆ. ಇದೀಗ ಅವರ ಮಗ ಹಾಗೂ ಬೆಳಗಾವಿ ಮಾಜಿ ಸಂಸದ ದಿ.ಸುರೇಶ ಅಂಗಡಿ ಅವರ ಅಳಿಯ ಸಂಕಲ್ಪ ಶೆಟ್ಟರ್ ಹೆಸರು ಶಿಗ್ಗಾವಿ ಉಪಚುನಾವಣೆಯ ಪ್ರತಿಷ್ಠಿತ ಕ್ಷೇತ್ರಕ್ಕೆ ಬಿಜೆಪಿಯಿಂದ ಕೇಳಿ ಬಂದಿದೆ. ಶಿಗ್ಗಾವಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಸವರಾಜ ಬೊಮ್ಮಾಯಿ ಇದೀಗ ಹಾವೇರಿ ಲೋಕಸಭಾ ಮತಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಗ್ಗಾವಿಗೆ ಉಪಚುನಾವಣೆ ನಡೆಯಲಿದ್ದು ಬಿಜೆಪಿಯಿಂದ ಜಗದೀಶ ಶೆಟ್ಟರ್ ಮಗ ಸಂಕಲ್ಪ ಶೆಟ್ಟರ್ ಹೆಸರು ಈಗ ಸಾಮಾಜಿಕ ಜಾಲತಾಣದಲ್ಲಿ ಪ್ರಮುಖವಾಗಿ ವೈರಲಾಗಿದೆ. ಅವರಿಗೆ ಟಿಕೆಟ್ ನೀಡಬೇಕು ಎಂಬ ವ್ಯಾಪಕವಾಗಿ ಕೇಳಿಬಂದಿದೆ.