ಬೆಳಗಾವಿ : ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಇಂದು ಬೆಳಗಾವಿ ನಗರದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಸಂಸದೆ ಮಂಗಳಾ ಅಂಗಡಿ, ಮಾಜಿ ಶಾಸಕ ಸಂಜಯ ಪಾಟೀಲ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ, ಮಾಜಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಪ್ರಮುಖರಾದ ಆರ್.ಕೆ.ಪಾಟೀಲ, ರಾಜೇಂದ್ರ ಹರಕುಣಿ, ಮುರಘೇಂದ್ರಗೌಡ ಪಾಟೀಲ ಹಾಗೂ ಪಕ್ಷದ ಪದಾಧಿಕಾರಿಗಳು,ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಾಜಿ ಮುಖ್ಯಮಂತ್ರಿ ಮತ್ತು ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಸವದತ್ತಿ ಕ್ಷೇತ್ರದ ಪ್ರವಾಸದ ವಿವರ:

ದಿನಾಂಕ: 30 ಮಾರ್ಚ್ 2024 (ಶನಿವಾರ)
ಬೆಳಿಗ್ಗೆ 09:30 ಗಂಟೆಗೆ
ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಭೇಟಿ.
10 ಗಂಟೆಯಿಂದ 11 ರ ವರೆಗೆ
ಸವದತ್ತಿಯಲ್ಲಿ ಸ್ಥಳೀಯ ನಾಯಕರ ಭೇಟಿ ಮಾಡುವರು.
ಮಧ್ಯಾಹ್ನ 12:00 ಕ್ಕೆ
ಹೂಲಿ ಅಜ್ಜನವರ ಮಠಕ್ಕೆ ಭೇಟಿ ನೀಡುವರು.
12:30 ಕ್ಕೆ ಶಿರಸಂಗಿಯ
ಶ್ರೀ ಕಲ್ಲಮ್ಮದೇವಿ ದೇವಸ್ಥಾನಕ್ಕೆ ಭೇಟಿ ನೀಡುವರು.
02:30 ಕ್ಕೆ ಮುನವಳ್ಳಿಯ
ಶ್ರೀ ಸೋಮಶೇಖರ ಮಠಕ್ಕೆ ಭೇಟಿ ನೀಡುವರು.
03:00 ಗಂಟೆಗೆ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವರು.
3.30 ಗಂಟೆಗೆ ಸ್ಥಳೀಯ ನಾಯಕರ ಭೇಟಿಯಾಗುವರು.
4 ಗಂಟೆಗೆ ಬೆನಕಟ್ಟಿ ಗ್ರಾಮದ
ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡುವರು.
ಸಾಯಂಕಾಲ 5 ಗಂಟೆಗೆ ಯರಗಟ್ಟಿಯ ಸ್ಥಳೀಯ ನಾಯಕರನ್ನು ಭೇಟಿಮಾಡುವರು.