ಮಂಗಳೂರು: ಇತಿಹಾಸ ಪ್ರಸಿದ್ಧ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ ಡಿಸೆಂಬರ್ 15 ರಿಂದ 22 ರವರೆಗೆ ನಡೆಯಲಿದೆ. ಡಿಸೆಂಬರ್ 16 ರಂದು ಮಹೋತ್ಸವ ನಡೆಯಲಿದೆ. ಡಿ. 15 ರಂದು ಸಂಜೆ ನವಕ ಪ್ರಧಾನ ಕಲಶಾಭಿಷೇಕ, ಮಹಾಪೂಜೆ, ರಾತ್ರಿ 9ಕ್ಕೆ ಧ್ವಜಾರೋಹಣ ನಡೆಯಲಿದೆ. 16ರಂದು ಮಹೋತ್ಸವದ ಪ್ರಯುಕ್ತ ಬೆಳಗ್ಗೆ 7:30 ರಿಂದ 9 ರವರೆಗೆ ತುಲಾಭಾರ ಸೇವೆ, 10:00 ಕ್ಕೆ ಶ್ರೀ ಉಳ್ಳಾಯ ದೈವದ ನೇಮೋತ್ಸವ, ಉರುಳು ಸೇವೆ, ಕಂಚಿಲು ಸೇವೆ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ 11ಕ್ಕೆ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ, ರಥೋತ್ಸವ ನಡೆಯಲಿದೆ. 17 ರಂದು ರಾತ್ರಿ 9ಕ್ಕೆ ಶ್ರೀಕಾಂತೇರಿ ಧೂಮಾವತಿ ನೇಮೋತ್ಸವ, 18 ರಂದು ರಾತ್ರಿ 9:00 ರಿಂದ ಶ್ರೀ ಸಾರಾಳ ಧೂಮಾವತಿ ನೇಮೋತ್ಸವ, 19ರಂದು ರಾತ್ರಿ 9ಕ್ಕೆ ಶ್ರೀ ಜಾರಂದಾಯ ನೇಮೋತ್ಸವ, 20 ರಂದು ರಾತ್ರಿ ಶ್ರೀ ಕೈಯ್ಯೂರು ಧೂಮಾವತಿ ನೇಮೋತ್ಸವ, 21 ರಂದು ಶ್ರೀ ಪಿಲಿ ಚಾಮುಂಡಿ ನೇಮೋತ್ಸವ, 22 ರಂದು ಬೆಳಗ್ಗೆ 9ಕ್ಕೆ ತುಲಾಭಾರ ಸೇವೆಯ ಬಳಿಕ ಧ್ವಜಾರೋಹಣ, ಮಧ್ಯಾಹ್ನ 2 ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.