ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ದೆಹಲಿ ಹಾಗೂ ಬೆಂಗಳೂರಿನಿಂದ ಬಂದ ರಾಷ್ಟ್ರೀಯ ಡಿಟೆಕ್ಟರ್ ಏಜನ್ಸಿಯ ತಜ್ಞರು ಗುರುವಾರ (ಜುಲೈ 25) ಕಾರ್ಯಾಚರಣೆ ಆರಂಭ ಮಾಡಿದ್ದಾರೆ.

ಕೇರಳದ ಲಾರಿ ಇರುವಿಕೆ ಬಗ್ಗೆ ಮಧ್ಯಾಹ್ನದ ವರೆಗೆ ಅವರಿಗೆ ಯಾವುದೇ ನಿಖರ ಕುರುಹು ಸಿಕ್ಕಿಲ್ಲ. ಅತಿ ಹೆಚ್ಚಿನ ಸಾಮರ್ಥ್ಯದ ಡ್ರೋಣ್ ಮೂಲಕ ಲಾರಿಯ ಮಾಹಿತಿ ಪಡೆಯುವ ಪ್ರಯತ್ನ ಮುಂದುವರಿದಿದೆ. ಹ್ಯಾಲಿಕಾಪ್ಟರ್ ಮೂಲಕವೂ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ.

ಬೆಳಗಾವಿಯ ಗೋಕಾಕ್ ದಿಂದ ಬಂದಿರುವ ಭಾರೀ ಸಾಮರ್ಥ್ಯದ ಪೊಕ್ಲೆನ್ ಯಂತ್ರದ ಮೂಲಕ ನದಿಯಲ್ಲಿ ಮಣ್ಣು ಎತ್ತುವ ಕಾರ್ಯವನ್ನೂ ತೀವ್ರಗೊಳಿಸಲಾಗಿದೆ.
ಜುಲೈ 16 ರಂದು ಉತ್ತರ ಕನ್ನಡ ಜಿಲ್ಲೆಯ ಶಿರೂರು ಗ್ರಾಮದ ರಾಷ್‌ರ ಭಾರೀ ಭೂಕುಸಿತ ಸಂಭವಿಸಿದೆ. ಇದುವರೆಗೆ ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿದ್ದು ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಜಗನ್ನಾಥ, ಕೇರಳ ಮೂಲದವರಾದ ಲಾರಿ ಚಾಲಕ ಅರ್ಜುನ್ ಸೇರಿದಂತೆ ನಾಪತ್ತೆಯಾದವರ ಶೋಧ ಕಾರ್ಯ ನಡೆದಿದೆ.