ಉಡುಪಿ : ದಿನಾಂಕ 14.7.2024 ರಂದು 10 ನೇ ಅಂತರ್ ರಾಷ್ಟ್ರೀಯ ಯೋಗಾ ದಿನಾಚರಣೆಯ ಪ್ರಯುಕ್ತ ಎಸ್ ಜಿ ಎಸ್ ಅಂತರ್ ರಾಷ್ಟ್ರೀಯ ಯೋಗ ಸಂಸ್ಥೆಯ ಪ್ರಯೋಜಕತ್ವದಲ್ಲಿ ನಡೆದ ಅಂತರ್ ರಾಜ್ಯ ಯೋಗಾಸನ ಸ್ಪರ್ಧೆಯಲ್ಲಿ ಉಡುಪಿಯ ಯೋಗ ಪ್ರತಿಭೆ ಶಿವಾನಿ ಶೆಟ್ಟಿ ಇವರು ಉತ್ತಮ 10 ಯೋಗಪಟುಗಳಲ್ಲಿ ಆಯ್ಕೆಯಾಗಿದ್ದು ಅಂತರ್ ರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರು ವಿದ್ಯೋದಯ ವಿದ್ಯಾ ಸಂಸ್ಥೆ ಉಡುಪಿ ಇಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇವರಿಗೆ ಯೋಗ ಗುರು ಕೆ.ನರೇಂದ್ರ ಕಾಮತ್ ತರಬೇತಿ ನೀಡಿದ್ದರು.