Join The Telegram | Join The WhatsApp |
ಬೆಳಗಾವಿ :
ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಅವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಬೆಳಗಾವಿ ಪಾಟೀಲ ಮಾಳದ ಅಭಿಜಿತ್ ಸೋಮನಾಥ ಬಾತಕಾಂಡೆ (41),ಬಸ್ತವಾಡ ಸಂಭಾಜಿಗಲ್ಲಿಯ ರಾಹುಲ್ ನಿಂಗಾಣಿ ಕೊಡಚವಾಡ(32), ಬಸ್ತವಾಡ ಸಂಭಾಜಿಗಲ್ಲಿಯ ಜ್ಯೋತಿಬಾ ಗಂಗಾರಾಮ ಮುತಗೇಕರ(25) ಬಂಧಿತರು. ಇವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ರವಿ ಕೋಕಿತಕರ್ ಹಾಗೂ ಅಭಿಜಿತ್ ನಡುವಿನ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಗಲಾಟೆ ಗುಂಡಿನ ದಾಳಿಗೆ ಕಾರಣ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಅವರು ತಿಳಿಸಿದರು.
Join The Telegram | Join The WhatsApp |